ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯವಂತನೆಂಬ ಮೋದಿ ಖ್ಯಾತಿಗೆ ಧಕ್ಕೆ: ‘ಕೂ’ಗಿದ ಸುಬ್ರಮಣಿಯನ್‌ ಸ್ವಾಮಿ

Last Updated 21 ಡಿಸೆಂಬರ್ 2021, 5:16 IST
ಅಕ್ಷರ ಗಾತ್ರ

ನವದೆಹಲಿ: ಚೀನೀಯರ ಕುರಿತ ಪ್ರಧಾನಿ ನರೇಂದ್ರ ಮೋದಿ ಅವರ ಮೌನವು, ಸತ್ಯವಂತನೆಂಬ ಅವರ ಖ್ಯಾತಿಗೆ ಧಕ್ಕೆ ತರುತ್ತದೆ ಎಂದು ರಾಜ್ಯಸಭೆಯ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಕೂ’ನಲ್ಲಿ ಅವರು ಸೋಮವಾರ ರಾತ್ರಿ ಪೋಸ್ಟ್‌ ಪ್ರಕಟಿಸಿದ್ದಾರೆ.

‘ಯಾರೂ ಬಂದಿಲ್ಲ ( ಕೋಯಿ ಆಯಾ ನಹೀ)’ ಎಂದ ನಂತರವೂ, ಗಡಿ ನಿಯಂತ್ರಣಾ ರೇಖೆಯ ಬಳಿ ಹಲವು ಪ್ರದೇಶಗಳನ್ನು ಚೀನಾ ವಶಕ್ಕೆ ಪಡೆದ ಬಳಿಕವೂ ಪ್ರಧಾನಿ ನರೇಂದ್ರ ಮೋದಿ ಅವರು ಲಡಾಖ್ ಮತ್ತು ಅರುಣಾಚಲದಲ್ಲಿನ ಆತಿಕ್ರಮಣದ ಬಗ್ಗೆ ಮೌನವಾಗಿದ್ದರೆ, ಅದು ಅವರ ಸತ್ಯವಂತನೆಂಬ ಖ್ಯಾತಿಗೆ ಧಕ್ಕೆ ತರುತ್ತದೆ,’ ಎಂದು ಸುಬ್ರಮಣಿಯನ್‌ ಸ್ವಾಮಿ ವ್ಯಂಗ್ಯವಾಡಿದ್ದಾರೆ.

ಅಲ್ಲದೆ, ಈ ವಿಚಾರದಲ್ಲಿನ ಮೋದಿ ಮೌನ ಬಿಜೆಪಿಯನ್ನು ಅಂಧಕಾರಕ್ಕೆ ತಳ್ಳುತ್ತದೆ. ವಾಸ್ತವ ಪರೀಕ್ಷಿಸಲು ಇದು ಸಕಾಲ ಎಂದು ಸುಬ್ರಮಣಿಯನ್ ಸ್ವಾಮಿ ‘ಕೂ’ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT