ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ಮೇಲೆ ದಾಳಿ: ಇಂದು ಟಿಎಂಸಿ ಸಂಸದರ ನಿಯೋಗದಿಂದ ಚುನಾವಣಾ ಆಯುಕ್ತರ ಭೇಟಿ

Last Updated 12 ಮಾರ್ಚ್ 2021, 6:26 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲಿನ ದಾಳಿಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ ಆರು ಸಂಸದರ ನಿಯೋಗವೊಂದು ಇಂದು (ಶುಕ್ರವಾರ) ಮಧ್ಯಾಹ್ನ 12 ಗಂಟೆಗೆ ಚುನಾವಣಾ ಆಯುಕ್ತರನ್ನು ಭೇಟಿ ಮಾಡಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಿಯೋಗದಲ್ಲಿ ರಾಜ್ಯಸಭಾ ಸದಸ್ಯರಾದ ಡೆರೆಕ್‌ ಒ’ಬ್ರಿಯಾನ್, ಶಾಂತನು ಸೇನ್‌, ಲೋಕಸಭಾ ಸದಸ್ಯರಾದ ಸೌಗತ ರಾಯ್‌, ಕಕೊಲಿ ಘೋಷ್ ದಸ್ತಿದಾರ್‌, ಶತಾಬ್ದಿ ರಾಯ್‌, ಪ್ರತಿಮಾ ಮೊಂಡಲ್‌ ಇರಲಿದ್ದಾರೆ.

ಪಕ್ಷದ ನಿಯೋಗ, ಗುರುವಾರ ಕೋಲ್ಕತ್ತಾದಲ್ಲಿರುವ ಚುನಾವಣಾ ಸಮಿತಿ ಅಧಿಕಾರಿಗಳನ್ನು ಭೇಟಿಯಾಗಿ, ‘ಮಮತಾ ಬ್ಯಾನರ್ಜಿ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿವೆ ಎಂಬ ವರದಿಗಳಿದ್ದರೂ,ಚುನಾವಣಾ ಆಯೋಗ ಏನೂ ಕ್ರಮ ಕೈಗೊಂಡಿಲ್ಲ‘ ಎಂದು ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT