ಎವರೆಸ್ಟ್ ಏರಿದ ಭಾರತ ಮೂಲದ ಸಿಂಗಪುರ ಬಾಲಕ

ಸಿಂಗಪುರ: ಭಾರತ ಮೂಲದ ಆರು ವರ್ಷ ವಯಸ್ಸಿನ ಬಾಲಕ ಓಂ ಮದನ್ ಗಾರ್ಗ್, ನೇಪಾಳದ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಪರ್ವತಾರೋಹಣ ಪೂರ್ಣಗೊಳಿಸಿದ ಅತ್ಯಂತ ಕಿರಿಯ ಸಿಂಗಪುರ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇದು ಸಿಂಗಪುರ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ.
ಓಂ ಮದನ್ ತಮ್ಮ ಪೋಷಕರೊಂದಿಗೆ ಕಳೆದ ಅಕ್ಟೋಬರ್‌ನಲ್ಲಿ ಪರ್ವತಾರೋಹಣ ಆರಂಭಿಸಿದ್ದರು. 10 ದಿನಗಳಲ್ಲಿ 65 ಕಿಲೋ ಮೀಟರ್ ಕ್ರಮಿಸಿ 5,364 ಮೀಟರ್ ಎತ್ತರದಲ್ಲಿರುವ ಪರ್ವತದ ದಕ್ಷಿಣದ ಬೇಸ್‌ಕ್ಯಾಂಪ್ ತಲುಪಿದ್ದರು.
ಮದನ್ ಪೋಷಕರು ಮಗನಿಗೆ ಎರಡು ವರ್ಷವಿರುವಾಗಲೇ ವಿಯೆಟ್ನಾಂ, ಥಾಯ್ಲೆಂಡ್ ಮತ್ತಿತರ ದೇಶಗಳಿಗೆ ತಮ್ಮೊಂದಿಗೆ ಪ್ರವಾಸಕ್ಕೆ ಕರೆದೊಯ್ದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.