ಬುಧವಾರ, ಅಕ್ಟೋಬರ್ 28, 2020
23 °C

ಕೇದಾರನಾಥ ದುರಂತ: 7 ವರ್ಷಗಳ ಬಳಿಕ ನಾಲ್ವರ ಅಸ್ಥಿಪಂಜರದ ಅವಶೇಷಗಳು ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಡೆಹ್ರಾಡೂನ್: ಕೇದಾರನಾಥ ದುರಂತದಲ್ಲಿ ಮೃತಪಟ್ಟಿದ್ದ ನಾಲ್ವರ ಅಸ್ಥಿಪಂಜರದ ಅವಶೇಷಗಳು, ಅವಘಡ ಸಂಭವಿಸಿದ ಏಳು ವರ್ಷಗಳ ತರುವಾಯ ಹಿಮಾಲಯದ ರಾಂಬರ ಪ್ರದೇಶದಲ್ಲಿ ಪತ್ತೆಯಾಗಿದೆ.

ಪೊಲೀಸ್‌ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಭಾನುವಾರ‌ ಜಂಟಿ ಕಾರ್ಯಾಚರಣೆ ನಡೆಸಿದ ವೇಳೆ ವೇಳೆ ಅವಶೇಷಗಳು ಪತ್ತೆಯಾಗಿದೆ. ಉತ್ತರಾಖಂಡ ಹೈಕೋರ್ಟ್ ಆದೇಶದ ಮೇರೆಗೆ ಶೋಧ ಕಾರ್ಯಾಚರಣೆ ನಡೆಯಿತು ಎಂದು ರುದ್ರಪ್ರಯಾಗ್‌ನ ಪೊಲೀಸ್ ವರಿಷ್ಠಾಧಿಕಾರಿ ನವನೀತ್‌ ಸಿಂಗ್‌ ಬುಲ್ಲಾರ್‌ ಅವರು ತಿಳಿಸಿದರು.

ಅಸ್ಥಿಪಂಜರದ ಡಿಎನ್‌ಎ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಂಡಿದ್ದು, ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿದೆ. ಕೇದಾರನಾಥ ದುರಂತದ ವೇಳೆ ನಾಪತ್ತೆಯಾಗಿದ್ದ ವ್ಯಕ್ತಿಗಳ ಕುಟುಂಬದ ಸದಸ್ಯರ ಡಿಎನ್‌ಎಗಳೊಂದಿಗೆ ಈಗ ಪಡೆದಿರುವ ಅಸ್ಥಿಪಂಜರದ ಡಿಎನ್‌ಎಗಳನ್ನು ಹೋಲಿಸಿ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದರು. 

ದುರಂತದಲ್ಲಿ ಮೃತಪಟ್ಟವರಲ್ಲಿ ಸುಮಾರು 703 ಜನರ ಅಸ್ಥಿಪಂಜರದ ಅವಶೇಷಗಳು ಇದುವರೆಗೂ ಪತ್ತೆಯಾಗಿವೆ.  ಕೇದಾರನಾಥದಲ್ಲಿ 2013ರ ಜೂನ್ 14 ರಿಂದ ಜೂನ್ 17ರವರೆಗೆ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿತ್ತು. ರಸ್ತೆ, ಕಟ್ಟಡಗಳು ಹಾನಿಗೊಂಡಿದ್ದವು. ಸುಮಾರು 10 ಸಾವಿರ ಜನ ಮೃತಪಟ್ಟಿದ್ದರು. 3,183 ಮಂದಿ ಇನ್ನೂ ಕಾಣೆಯಾಗಿದ್ದಾರೆ.

ಇದನ್ನೂ ಓದಿ: 2013 ಕೇದಾರನಾಥ ಪ್ರವಾಹ: ನಾಪತ್ತೆಯಾದವರನ್ನು ಪತ್ತೆ ಹಚ್ಚಲು ಪೊಲೀಸ್ ಕಾರ್ಯಾಚರಣೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು