ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಾಲಿ ಫೋಗಾಟ್‌ ಕೊಲೆ: ಡ್ರಗ್‌ ಪೆಡ್ಲರ್‌ ಸೇರಿ ಇಬ್ಬರ ಬಂಧನ

Last Updated 27 ಆಗಸ್ಟ್ 2022, 11:17 IST
ಅಕ್ಷರ ಗಾತ್ರ

ಪಣಜಿ: ‘ಬಿಜೆಪಿ ನಾಯಕಿ ಸೋನಾಲಿ ಫೋಗಾಟ್‌ ಕೊಲೆ ಪ್ರಕರಣ ಸಂಬಂಧ ಡ್ರಗ್‌ ಪೆಡ್ಲರ್‌ ದತ್ತಪ್ರಸಾದ್‌ ಗಾಂವ್ಕರ್‌ ಹಾಗೂ ಉತ್ತರ ಗೋವಾದಲ್ಲಿರುವ ಕರ್ಲೀಸ್‌ ರೆಸ್ಟೋರೆಂಟ್‌ನ ಮಾಲೀಕ ಎಡ್ವಿನ್‌ ನೂನೆಸ್‌ ಎಂಬುವರನ್ನು ಶನಿವಾರ ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಒಟ್ಟು ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ’ ಎಂದು ಗೋವಾ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ದತ್ತಪ್ರಸಾದ್‌ ಹಾಗೂ ಎಡ್ವಿನ್‌ ಅವರನ್ನು ಅಂಜುನಾದಲ್ಲಿ ಶನಿವಾರ ಮಧ್ಯಾಹ್ನ ಬಂಧಿಸಲಾಗಿದೆ. ಇವರ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಪಟ್ಟಿರುವ ಸುಧೀರ್‌ ಸಗಾವಾನ್‌ ಮತ್ತು ಸುಖ್ವಿಂದರ್‌ ಸಿಂಗ್‌ ಅವರಿಗೆ ದತ್ತಪ್ರಸಾದ್‌ ಡ್ರಗ್‌ ಪೂರೈಸಿದ್ದ. ವಿಚಾರಣೆ ವೇಳೆ ಆರೋಪಿಗಳು ಈ ವಿಷಯ ಬಾಯ್ಬಿಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.

‘ದತ್ತಪ್ರಸಾದ್‌ನಿಂದ ಡ್ರಗ್‌ ಖರೀದಿಸಿದ್ದ ಆರೋಪಿಗಳು ಅದನ್ನು ನೀರಿನಲ್ಲಿ ಬೆರೆಸಿದ್ದರು. ಬಳಿಕ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಸೋನಾಲಿ ಅವರಿಗೆಕುಡಿಯುವಂತೆ ಬಲವಂತಪಡಿಸಿದ್ದರು. ಕರ್ಲೀಸ್‌ ರೆಸ್ಟೋರೆಂಟ್‌ನಲ್ಲಿ ಆಗಸ್ಟ್‌ 22ರಂದು ಪಾರ್ಟಿ ನಡೆಸಲಾಗಿತ್ತು. ಸುಧೀರ್‌ ಮತ್ತು ಸುಖ್ವಿಂದರ್‌ ಅವರನ್ನು ಕೊಲೆ ಆರೋಪದಡಿ ಬಂಧಿಸಲಾಗಿತ್ತು’ ಎಂದು ಮಾಹಿತಿ ನೀಡಿದ್ದಾರೆ.

ಆರೋಪಿಗಳು 10 ದಿನ ಪೊಲೀಸ್‌ ಕಸ್ಟಡಿಗೆ

ಪ್ರಕರಣದ ಪ್ರಮುಖ ಆರೋಪಿಗಳಾದಸುಧೀರ್‌ ಮತ್ತು ಸುಖ್ವಿಂದರ್‌ ಅವರನ್ನು ಇಲ್ಲಿನ ನ್ಯಾಯಾಲಯವು 10 ದಿನಗಳವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.

ಅಂಜುನಾ ಪೊಲೀಸರು ಆರೋಪಿಗಳನ್ನು ಶನಿವಾರ ಮಪುಸಾ ನಗರದಲ್ಲಿರುವ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT