ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಪಿಬಿ ಶ್ವಾಸಕೋಶದಲ್ಲಿ ಚೇತರಿಕೆ, ಆರೋಗ್ಯ ಸ್ಥಿರ: ಪುತ್ರ ಎಸ್‌ಪಿ ಚರಣ್ ವಿಡಿಯೊ

Last Updated 15 ಸೆಪ್ಟೆಂಬರ್ 2020, 3:48 IST
ಅಕ್ಷರ ಗಾತ್ರ

ಚೆನ್ನೈ: ಕೋವಿಡ್‌–19 ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ (74) ಅವರ ಆರೋಗ್ಯದಲ್ಲಿ ಬಹಳಷ್ಟು ಚೇತರಿಕೆ ಕಂಡು ಬಂದಿರುವುದಾಗಿ ಅವರ ಪುತ್ರ ಎಸ್.ಪಿ. ಚರಣ್ ವಿಡಿಯೊ ಸಂದೇಶದ ಮೂಲಕ ಹಂಚಿಕೊಂಡಿದ್ದಾರೆ.

ಸೋಮವಾರ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿರುವ ಚರಣ್‌, 'ಅವರ (ಎಸ್‌ಪಿಬಿ) ಶ್ವಾಸಕೋಶದ ಆರೋಗ್ಯ ಉತ್ತಮವಾಗುತ್ತಿದೆ. ಚೇತರಿಕೆಯಾಗಿರುವುದು ಎಕ್ಸ್‌–ರೇನಲ್ಲಿ ಗುರುತಿಸಬಹುದಾಗಿದೆ. ಫಿಸಿಯೊಥೆರಪಿ ಮಾಡಲಾಗುತ್ತಿದ್ದು, ಉತ್ಸಾಹದಿಂದ ತೊಡಗಿಸಿಕೊಳ್ಳುತ್ತಿದ್ದಾರೆ. 15–20 ನಿಮಿಷಗಳ ವರೆಗೂ ಅವರು ಕುಳಿತಿರುತ್ತಾರೆ. ಈಗ ನೇರವಾಗಿ ಆಹಾರ ನೀಡುವುದನ್ನು ಆರಂಭಿಸುತ್ತಿದ್ದಾರೆ. ಅವರು ಗುಣಮುಖರಾಗುತ್ತಿದ್ದಾರೆ ಹಾಗೂ ಆರೋಗ್ಯ ಸ್ಥಿರವಾಗಿದೆ' ಎಂದು ಹೇಳಿದ್ದಾರೆ.

ಚೆನ್ನೈನ ಎಂಜಿಎಂ ಹೆಲ್ತ್‌ಕೇರ್‌ ಹಾಸ್ಪಿಟಲ್‌ನಲ್ಲಿ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ವಿಡಿಯೊದಲ್ಲಿ ಎಸ್‌ಪಿಬಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ.


ಕೋವಿಡ್‌ ದೃಢಪಟ್ಟ ಬೆನ್ನಲ್ಲೇ ಆಗಸ್ಟ್ 5ರಂದು ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆರಂಭದಲ್ಲಿ ಸೋಂಕಿನ ಕೆಲವು ಲಕ್ಷಣಗಳಷ್ಟೇ ಕಂಡು ಬಂದಿತ್ತು. ಅನಂತರ ಅವರನ್ನು ಐಸಿಯುಗೆ ವರ್ಗಾಯಿಸಲಾಯಿತು. ಎಸ್‌ಪಿಬಿ 16 ಭಾಷೆಗಳಲ್ಲಿ ಸುಮಾರು 40,000 ಹಾಡುಗಳನ್ನು ಹಾಡಿದ್ದಾರೆ. ಆರು ಬಾರಿ ರಾಷ್ಟ್ರೀಯ ಪ್ರಶಸ್ತಿ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT