ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶ: ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ಸ್ಥಾನ ಕಳೆದುಕೊಂಡ ಎಸ್‌ಪಿ

ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ * ಪ್ರಜಾಪ್ರಭುತ್ವ ವಿರೋಧಿ ನಿಲುವು– ಆರೋಪ
Last Updated 8 ಜುಲೈ 2022, 15:52 IST
ಅಕ್ಷರ ಗಾತ್ರ

ಲಖನೌ: ಒಟ್ಟು 100 ಸದಸ್ಯ ಬಲದ ಸದನದಲ್ಲಿ ತಮ್ಮ ಪಕ್ಷದ ಶಾಸಕ ಸದಸ್ಯರ ಸಂಖ್ಯೆಯು 10ಕ್ಕಿಂತಲೂ ಕಡಿಮೆಯಾದ ಕಾರಣ ಉತ್ತರಪ್ರದೇಶದ ವಿಧಾನಪರಿಷತ್ತಿನಲ್ಲಿ ಸಮಾಜವಾದಿ ಪಕ್ಷವು (ಎಸ್‌ಪಿ) ವಿರೋಧಪಕ್ಷದ ಸ್ಥಾನವನ್ನು ಕಳೆದುಕೊಂಡಿದೆ.

ವಿರೋಧಪಕ್ಷದ ಸ್ಥಾನ ಕಳೆದುಕೊಂಡ ಬೆನ್ನಲ್ಲೇ ಸಮಾಜವಾದಿ ಪಕ್ಷವು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಮೇ 27ರಂದು ವಿಧಾನಪರಿಷತ್ತಿನಲ್ಲಿ 11 ಸದಸ್ಯ ಬಲವನ್ನು ಹೊಂದಿದ್ದ ಸಮಾಜವಾದಿ ಪಕ್ಷವು ಅತಿದೊಡ್ಡ ವಿರೋಧಪಕ್ಷವಾಗಿತ್ತು. ಇದರ ಆಧಾರದಲ್ಲಿ ಲಾಲ್‌ ಬಿಹಾರಿ ಯಾದವ್ ಅವರನ್ನು ವಿರೋಧಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಜುಲೈ 7ರಂದು ಪರಿಷತ್ತಿನಲ್ಲಿ ಪಕ್ಷದ ಸದಸ್ಯರ ಸಂಖ್ಯೆಗೆ 9ಕ್ಕೆ ಇಳಿಯಿತು. ಪ್ರತಿಪಕ್ಷದ ಸ್ಥಾನ ಪಡೆಯಲು 10ಕ್ಕಿಂತಲೂ ಕಡಿಮೆ ಬಲ ಹೊಂದಿದ್ದರಿಂದ ಪಕ್ಷವು ವಿರೋಧಪಕ್ಷದ ಸ್ಥಾನವನ್ನು ಕಳೆದುಕೊಂಡಿದೆ’ ಎಂದು ಪ್ರಧಾನ ಕಾರ್ಯದರ್ಶಿ ರಾಜೇಶ್ ಸಿಂಗ್ ಅವರು ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಲಾಲ್ ಬಿಹಾರಿ ಯಾದವ್ ಅವರನ್ನು ತಕ್ಷಣದಿಂದಲೇ ವಿರೋಧಪಕ್ಷದ ನಾಯಕರ ಮಾನ್ಯತೆಯನ್ನು ಕಳೆದುಕೊಂಡಿದ್ದಾರೆ. ಅವರು ಪರಿಷತ್ತಿನಲ್ಲಿ ಎಸ್‌ಪಿ ನಾಯಕರಾಗಿ ಮುಂದುವರಿಯಲಿದ್ದಾರೆ’ ಎಂದೂ ಹೇಳಿದ್ದಾರೆ.

ಉತ್ತರಪ್ರದೇಶ ವಿಧಾನಪರಿಷತ್ತಿನ 12 ಸದಸ್ಯರ ಅವಧಿ ಬುಧವಾರ ಅಂತ್ಯಗೊಂಡಿದೆ. ಇವರಲ್ಲಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಸಚಿವ ಚೌಧರಿ ಭೂಪೇಂದ್ರ ಸಿಂಗ್ ಸೇರಿದ್ದಾರೆ. ಆದರೆ, ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಜಯಗಳಿಸಿದ ನಂತರ ಇಬ್ಬರೂ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ.

ಎಸ್‌ಪಿಯ 6, ಬಿಎಸ್‌ಪಿಯ 3 ಹಾಗೂ ಕಾಂಗ್ರೆಸ್‌ನ ಏಕೈಕ ಸದಸ್ಯರ ಅವಧಿಯು ಬುಧವಾರ ಅಂತ್ಯಗೊಂಡಿದೆ. ವಿಧಾನಪರಿಷತ್ತಿನಲ್ಲಿ ಬಿಜೆಪಿ 72 ಸದಸ್ಯರನ್ನು ಹೊಂದಿದ್ದರೆ ಸಮಾಜವಾದಿ ಪಕ್ಷವು 9 ಸದಸ್ಯರನ್ನು ಹೊಂದಿದೆ. ಸದನದಲ್ಲಿ ಕಾಂಗ್ರೆಸ್‌ ಸದಸ್ಯರನ್ನು ಹೊಂದಿಲ್ಲ.

ಸಮಾಜವಾದಿ ಪಕ್ಷ ಆಕ್ರೋಶ

‘ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ನಿಯಮಗಳಿಗೆ ವಿರುದ್ಧವಾದ್ದದು.ಈ ನಿರ್ಧಾರವು ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ ಮತ್ತು ಕಾನೂನನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದೆ’ ಎಂದು ಅಖಿಲೇಶ್ ಯಾದವ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಪ್ರತಿಪಕ್ಷದ ನಾಯಕ ಸದನದಲ್ಲಿ ವಿರೋಧಪಕ್ಷದ ನಾಯಕನಾಗಿರುತ್ತಾನೆ. ತಪ್ಪು ನಿಯಮಗಳನ್ನು ಉಲ್ಲೇಖಿಸಿ ಅವರ ಮಾನ್ಯತೆಯನ್ನು ಕೊನೆಗೊಳಿಸಿರುವುದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಮತ್ತು ಕಳಂಕ ತರುವ ಯತ್ನವಾಗಿದೆ. ಸದನವು ಪ್ರತಿರೋಧವನ್ನು ದುರ್ಬಲಗೊಳಿಸುವ ಮತ್ತು ಅದರ ಧ್ವನಿಯನ್ನು ಮಂದಗೊಳಿಸಲು ಪ್ರಯತ್ನಿಸುತ್ತಿದೆ’ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋರ್ಟ್‌ಗೆ ಮೊರೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಪಿ ನಾಯಕಸಂಜಯ್ ಲಾಥರ್, ‘ನಮ್ಮ ಪಕ್ಷವು ವಿಧಾನ ಪರಿಷತ್ತಿನಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿರುವುದರಿಂದ ಅದರ ನಾಯಕನನ್ನು ವಿರೋಧ ಪಕ್ಷದ ನಾಯಕನಾಗಿ ಗುರುತಿಸಬೇಕು. ಇದರ ವಿರುದ್ಧ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಹೇಳಿದ್ದಾರೆ.

‘ಇಂತಹ ಕೃತ್ಯಗಳ ಮೂಲಕ ಆಡಳಿತಾರೂಢ ಬಿಜೆಪಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದೆ’ ಎಂದೂ ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT