ಶನಿವಾರ, ಜನವರಿ 28, 2023
20 °C
ಸದನದ ಬಾವಿಗಿಳಿದು ‍ಪ್ರತಿಭಟನೆ ಮಾಡುತ್ತಿದ್ದ ವೇಳೆ ಫೇಸ್‌ಬುಕ್‌ ಲೈವ್‌

ಉತ್ತರ ಪ್ರದೇಶ | ಸದನ ಕಲಾಪವನ್ನು ಫೇಸ್‌ಬುಕ್‌ ಲೈವ್‌ ಮಾಡಿದ ಎಸ್‌ಪಿ ಶಾಸಕ ಅಮಾನತು

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶ ವಿಧಾನಸಭೆಯ ಕಲಾಪವನ್ನು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಿದ ಸಮಾಜವಾದಿ ಪಕ್ಷದ (ಎಸ್‌ಪಿ) ಸದಸ್ಯನನ್ನು ಸ್ಪೀಕರ್‌ ಅಮಾನತು ಮಾಡಿದ್ದಾರೆ.

ಅತುಲ್‌ ಪ್ರಧಾನ್‌ ಎಂಬವರೇ ಫೇಸ್‌ಬುಕ್‌ ಲೈವ್‌ ಮಾಡಿ ಅಮಾನತಾದ ಶಾಸಕ.

ಕಲಾಪ ನಡೆಯುತ್ತಿದ್ದ ವೇಳೆ ಸಮಾಜವಾದಿ ಪಕ್ಷದ ಸದಸ್ಯರು, ರಾಮ್‌ಪುರ ಉಪಚುನಾವಣೆ ಸಂಬಂಧ ಆಡಳಿತ ಪಕ್ಷದ ನಡವಳಿಕೆ ವಿರೋಧಿಸಿ ಬಾವಿಗಿಳಿದು ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಅತುಲ್‌ ಪ್ರಧಾನ್‌ ಅವರು ಫೇಸ್‌ಬುಕ್‌ನಲ್ಲಿ ಪ್ರತಿಭಟನೆಯನ್ನು ನೇರ ಪ್ರಸಾರ ಮಾಡಿದ್ದಾರೆ.

ಇದು ವಿಧಾನಸಭಾಧ್ಯಕ್ಷರ ಗಮನಕ್ಕೆ ಬಂದಿದ್ದು, ಅತುಲ್‌ ಅವರನ್ನು ವಿಧಾನಸಭೆಯಿಂದ ಅಮಾನತು ಮಾಡಿದ್ದಾರೆ.

ತಕ್ಷಣವೇ ಅವರು ಸದನದಿಂದ ಹೊರ ನಡೆದಿದ್ದಾರೆ. ಬಳಿಕ ಅವರು ಹೊಸ ಸದಸ್ಯರೆಂದೂ, ಅವರಿಗೆ ನಿಯಮಾವಳಿಗಳ ಅರಿವಿಲ್ಲವೆಂದೂ ಎಸ್‌ಪಿ ಸದಸ್ಯರು ಸ್ಪೀಕರ್‌ಗೆ ಮನವರಿಕೆ ಮಾಡಿ ಅಮಾನತು ನಿರ್ಧಾರವನ್ನು ಮರು ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದರು.

‘ನಿಯಮಾವಳಿಗಳು ಗೊತ್ತಿಲ್ಲದೇ ಇರುವುದು ಒಪ್ಪುವಂಥದಲ್ಲ‘ ಎಂದು ಹೇಳಿದ ಸ್ಪೀಕರ್‌, ಅವರನ್ನು ಮತ್ತೆ ಸದನಕ್ಕೆ ಕರೆಸಿಕೊಳ್ಳಲು ನಿರಾಕರಿಸಿದರು.

ಬಳಿಕ 1 ಗಂಟೆಯ ನಂತರ ಸದನಕ್ಕೆ ಹಾಜರಾಗಲು ಅತುಲ್‌ ಅವರಿಗೆ ಸ್ಪೀಕರ್ ಅನುಮತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು