ಭಾನುವಾರ, ಮಾರ್ಚ್ 26, 2023
31 °C

ಆಗಸ್ಟ್ 4ರ ವರೆಗೆ ಇ.ಡಿ ಕಸ್ಟಡಿಗೆ ಶಿವಸೇನಾ ನಾಯಕ ಸಂಜಯ್‌ ರಾವುತ್‌

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ/ಔರಂಗಾಬಾದ್‌: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಶಿವಸೇನಾದ ಮುಖಂಡ ಸಂಜಯ ರಾವುತ್‌ ಅವರನ್ನು ವಿಶೇಷ ನ್ಯಾಯಾಲಯವು ಗುರುವಾರದ (ಆ. 4) ವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿದೆ. 

ಭಾನುವಾರ ರಾತ್ರಿ ಬಂಧಿಸಲಾದ ರಾವುತ್ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ.) ಹಣ ಅಕ್ರಮ ವರ್ಗಾವಣೆ ತಡೆ ನ್ಯಾಯಾಲಯದ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಅವರ ಮುಂದೆ ಸೋಮವಾರ ಹಾಜರು
ಪಡಿಸಿತು. ತನಿಖೆಗಾಗಿ ಎಂಟು ದಿನಗಳ ಅವಧಿಗೆ ವಶಕ್ಕೆ ಒಪ್ಪಿಸಬೇಕು ಎಂದು ಕೋರಿತು. ಅಪರಾಧ ಕೃತ್ಯದಿಂದ ಬಂದ ಹಣದಲ್ಲಿ ರಾವುತ್‌ ಮತ್ತು ಅವರ ಕುಟುಂಬದವರು ನೇರ ಫಲಾನುಭವಿ
ಗಳು ಎಂದು ಇ.ಡಿ. ಪರ ವಕೀಲರು ವಾದಿಸಿದರು.

ಹಿರಿಯ ವಕೀಲ ಅಶೋಕ್‌ ಮುಂಡರಗಿ ಅವರು ರಾವುತ್ ಪರವಾಗಿ ವಾದಿಸಿದರು. ರಾವುತ್‌ ವಿರುದ್ಧ ಇರುವ ಆರೋಪಗಳು ಅಸ್ಪಷ್ಟ ಮತ್ತು ಅವರ ಬಂಧನ ರಾಜಕೀಯ ಪ್ರೇರಿತ ಎಂದು ಮುಂಡರಗಿ ವಾದಿಸಿದರು. 

ಪಾತ್ರಾ ಚಾಳ್‌ ನವೀಕರಣ ಯೋಜನೆಯಲ್ಲಿ ಅಕ್ರಮವಾಗಿದೆ ಎಂಬ ಪ್ರಕರಣದಲ್ಲಿ ರಾವುತ್‌ ಅವರ ಬಂಧನವಾಗಿದೆ. ರಾವುತ್ ಅವರ ಮನೆಯಲ್ಲಿ ಭಾನುವಾರ ಒಂಬತ್ತು ತಾಸು ಶೋಧ ನಡೆಸಲಾಗಿತ್ತು. ಅವರ ಮನೆಯಲ್ಲಿ ₹11.5 ಲಕ್ಷ ನಗದು ದೊರೆತಿದೆ ಎಂದು ಇ.ಡಿ. ಹೇಳಿದೆ.

ಪ್ರತಿಭಟನೆ: ರಾವುತ್ ಬಂಧನವನ್ನು ಖಂಡಿಸಿ ಮಹಾರಾಷ್ಟ್ರದ ಔರಂಗಾಬಾದ್‌
ನಲ್ಲಿ ಶಿವಸೇನಾದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ನಾಸಿಕ್‌ನಲ್ಲಿಯೂ ಪ್ರತಿಭಟನೆ ನಡೆದಿದೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ರಾವುತ್‌ ಕುಟುಂಬದ ಸದಸ್ಯರನ್ನು ಸೋಮವಾರ ಭೇಟಿಯಾಗಿ
ದ್ದಾರೆ. 

ರಾವುತ್ ವಿರುದ್ಧ ಕೈಗೊಂಡಿರುವ ಕ್ರಮವನ್ನು ಎಐಎಂಐಎಂ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಮತ್ತು ಸಂಸದ ಇಮ್ತಿಯಾಜ್‌ ಜಲೀಲ್‌ ಕೂಡ ಟೀಕಿಸಿದ್ದಾರೆ.  ಕಳೆದ 70 ವರ್ಷಗಳಲ್ಲಿ ಎಂದೂ ರಾಜಕೀಯ ದ್ವೇಷ ಸಾಧನೆಗಾಗಿ ತನಿಖಾ ಸಂಸ್ಥೆಗಳನ್ನು ಇಷ್ಟೊಂದು ದುರ್ಬಳಕೆ ಮಾಡಿಕೊಂಡಿರಲಿಲ್ಲ ಎಂದು ಅವರು ಹೇಳಿದ್ದಾರೆ. 

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು