ಶನಿವಾರ, ಅಕ್ಟೋಬರ್ 23, 2021
20 °C

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧ್ಯಕ್ಷ ತುರ್ತು ಆಸ್ಪತ್ರೆಗೆ ದಾಖಲು

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ ದಾಸ್‌ ಅವರನ್ನು ಲಖನೌನಲ್ಲಿರುವ ಮೇದಾಂತ ಆಸ್ಪತ್ರೆಗೆ ತುರ್ತು ದಾಖಲು ಮಾಡಲಾಗಿದೆ.

ಆಮ್ಲಜನಕ ಪ್ರಮಾಣ ಕುಸಿತ ಮತ್ತು ಉಸಿರಾಟ ಸಮಸ್ಯೆ ಎದುರಾಗಿದ್ದು, ಭಾನುವಾರ ಬೆಳಗ್ಗೆ ಆಯೋಧ್ಯಾ ಜಿಲ್ಲಾ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗೋಪಾಲ ದಾಸ್‌ ಅವರ ಒಡನಾಡಿ ಕಮಲ್‌ ನಯನ್‌ ದಾಸ್‌ ತಿಳಿಸಿದ್ದಾರೆ.

ಶೀತ ಮತ್ತು ಕೆಮ್ಮು ಕಾಣಿಸಿಕೊಂಡಿದ್ದು, ಅತಿಯಾದ ಮೂತ್ರ ವಿಸರ್ಜನೆ ಸಮಸ್ಯೆಯೂ ಇತ್ತು. ಸ್ವಲ್ಪ ಸಮಯದ ವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ನೋಡಿಕೊಳ್ಳಲಾಯಿತು. ಕೊನೆಗೆ ಅಲ್ಲಿನ ವೈದ್ಯರೇ ಉತ್ತಮ ಚಿಕಿತ್ಸೆಗೆ ಮೇದಾಂತ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದರು ಎಂದು ನಯನ್‌ ದಾಸ್‌ ತಿಳಿಸಿದ್ದಾರೆ.

ಮಹಾಂತ ನೃತ್ಯ ಗೋಪಾಲ ದಾಸ್‌ ಅವರನ್ನು ಕಳೆದ ವರ್ಷ ಕೋವಿಡ್‌-19 ಸೋಂಕು ಬಾಧಿಸಿತ್ತು. ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ದೀರ್ಘವಧಿ ಚಿಕಿತ್ಸೆ ಪಡೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು