ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರ: ಶ್ರೀನಗರದಲ್ಲಿ –8.8 ಡಿಗ್ರಿ ಕನಿಷ್ಠ ತಾಪಮಾನ

ಮೂರು ದಶಕಗಳ ಇತಿಹಾಸದಲ್ಲೇ ಅತ್ಯಂತ ಕಡಿಮೆ ತಾಪಮಾನ
Last Updated 31 ಜನವರಿ 2021, 7:18 IST
ಅಕ್ಷರ ಗಾತ್ರ

ಶ್ರೀನಗರ: ಕಳೆದ ನಲ್ವತ್ತು ದಿನಗಳಲ್ಲೇ ಅತ್ಯಂತ ಕಡಿಮೆ ತಾಪಮಾನ ಕಾಶ್ಮೀರದ ಶ್ರೀನಗರದಲ್ಲಿ ದಾಖಲಾಗಿದೆ. ಇದು ಮೂರು ದಶಕಗಳಲ್ಲೇ ದಾಖಲಾದ ಅತ್ಯಂತ ಕನಿಷ್ಠ ತಾಪಮಾನ ಎನ್ನುತ್ತಾರೆ ಅಧಿಕಾರಿಗಳು.

ಶನಿವಾರ ರಾತ್ರಿ ಶ್ರೀನಗರದಲ್ಲಿ –8.8 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ. ಶುಕ್ರವಾರ ರಾತ್ರಿ ಇದು –7.7 ಡಿ.ಸೆ.ನಷ್ಟಿತ್ತು. 1991ರಲ್ಲಿ ಶ್ರೀನಗರದಲ್ಲಿ –11.4 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದ್ದನ್ನು ಹೊರತಪಡಿಸಿದರೆ, ಅಲ್ಲಿಂದ ನಿನ್ನೆಯವರೆಗೂ ಇಷ್ಟು ಕನಿಷ್ಠ ತಾಪಮಾನ ಎಂದೂ ದಾಖಲಾಗಿಲ್ಲ.

ಕಾಶ್ಮೀರ ಕಣಿವೆಯ ಗೇಟ್‌ವೇ ಪಟ್ಟಣ ಖಾಜಿಗುಂಡ್‌ನಲ್ಲಿ ಶನಿವಾರ ರಾತ್ರಿ –10.2 ಡಿಗ್ರಿ, ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್‌ನ ಸ್ಕೀ ರೆಸಾರ್ಟ್‌ನಲ್ಲಿ ಕನಿಷ್ಠ ತಾಪಮಾನವು –8 ಡಿಗ್ರಿ ಸೆ. ದಾಖಲಾಗಿತ್ತು.

ದಕ್ಷಿಣ ಕಾಶ್ಮೀರದ ವಾರ್ಷಿಕ ಅಮರನಾಥ ಯಾತ್ರೆಯ ಬೇಸ್ ಕ್ಯಾಂಪ್ ಪಹಲ್ಗಮ್ ಪ್ರವಾಸಿ ರೆಸಾರ್ಟ್‌ ವ್ಯಾಪ್ತಿಯಲ್ಲಿ –12 ಡಿಗ್ರಿಗಿಂತ ಕಡಿಮೆ ತಾಪಮಾನ ದಾಖಲಾಗಿತ್ತು. ‌ ಕುಪ್ವಾರಾದಲ್ಲಿ –4.7 ಡಿಗ್ರಿ, ದಕ್ಷಿಣದ ಕೊಕರ್ನಾಗ್ ಕನಿಷ್ಠ 13.1 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ.

ತೀವ್ರವಾದ ಶೀತ ಪರಿಸ್ಥಿತಿ ಕಾರಣ ಕಣಿವೆಯ ಹಲವಾರು ಪ್ರದೇಶಗಳಲ್ಲಿ ಜಲಮೂಲಗಳು ಮತ್ತು ಕುಡಿಯುವ ನೀರು ಸರಬರಾಜು ಮಾರ್ಗಗಳು ಹೆಪ್ಪುಗಟ್ಟಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT