ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾವಿಡ ಮಾದರಿಯು ಗಾಂಧಿ ತತ್ವಗಳನ್ನು ಸಾರುತ್ತಿದೆ: ಸ್ಟಾಲಿನ್‌

Last Updated 15 ಆಗಸ್ಟ್ 2022, 16:34 IST
ಅಕ್ಷರ ಗಾತ್ರ

ಚೆನ್ನೈ: ಮಹಾತ್ಮ ಗಾಂಧಿ ಸಾರಿದಜಾತ್ಯತೀತತೆ ಮತ್ತು ಬ್ರಾತೃತ್ವ ದೇಶಕ್ಕೆ ತುರ್ತಾಗಿ ಅಗತ್ಯವಿರುವ ಆದರ್ಶಗಳು. ಆಡಳಿತಾರೂಢ ಡಿಎಂಕೆಯ ದ್ರಾವಿಡ ಮಾದರಿಯು ಎಲ್ಲಾ ವರ್ಗದ ಜನರ ಒಳಿತಿಗಾಗಿ ಈ ಎಲ್ಲಾ ಉನ್ನತ ತತ್ವಗಳನ್ನು ಪಾಲನೆ ಮಾಡುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸೋಮವಾರ ಹೇಳಿದರು.

ಸೇಂಟ್‌ಫೋರ್ಟ್‌ ಜಾರ್ಜ್‌ನಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಅವರು, ‘ಮಹಾ
ಮಹಾತ್ಮ ಗಾಂಧಿಯವರು ಜಾತ್ಯತೀತತೆ, ಸಮಾನತೆ, ಸಹೋದರತ್ವ, ಸರಳತೆ, ಪ್ರಾಮಾಣಿಕತೆ ಮತ್ತು ಶಿಸ್ತುಗಳಂತಹ ಉನ್ನತ ಮಾನವೀಯ ತತ್ವಗಳನ್ನು ಪ್ರತಿಪಾದಿಸಿದರು. ಅವರು ಮಹಾನ್ ರಾಷ್ಟ್ರೀಯ ಸಂಕೇತಗಳಲ್ಲಿ ಒಬ್ಬರು’ ಎಂದು ಹೇಳಿದರು.

ಸಾಮಾಜಿಕ ನ್ಯಾಯ, ಸಮಾನತೆ, ಆತ್ಮಗೌರವ, ಜನಾಂಗೀಯ ಹಕ್ಕುಗಳು, ರಾಜ್ಯ ಸ್ವಾಯತ್ತತೆ, ಭಾಷಾ ಪ್ರೇಮ ಇವು ಡಿಎಂಕೆ ಆಡಳಿತದ ಮೂಲ ಮಾನವೀಯ ತತ್ವಗಳು. ಇಂತಹ ತತ್ವಗಳ ಆಧಾರದ ಮೇಲೆ ಅಭಿವೃದ್ಧಿಯಾಗಬೇಕು ಮತ್ತು ಅದು ಸಮಾಜದ ಬೆಳವಣಿಗೆಗೆ ಕಾರಣವಾಗಬೇಕು ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT