ಸೋಮವಾರ, ಜೂನ್ 27, 2022
26 °C

ತಮಿಳುನಾಡಿಗೆ 20 ಲಕ್ಷ ಡೋಸ್ ಲಸಿಕೆ: ಪ್ರಧಾನಿಗೆ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಮನವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ತಮಿಳುನಾಡು ರಾಜ್ಯದ ಸರ್ಕಾರದ ಕೋರಿಕೆಯಿಂದ ಕೋವಿಡ್–19 ಲಸಿಕೆಯ 20 ಲಕ್ಷ ಡೋಸ್ ಅನ್ನು ರಾಜ್ಯಕ್ಕೆ ಕಳುಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.

ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ಪೂರೈಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೋವಿಡ್ ಪ್ರಕರಣ ಏರುತ್ತಿರುವ ಹಿನ್ನೆಲೆಯಲ್ಲಿ ಜನರ ಜೀವ ಉಳಿಸಲು ಸಾರ್ವತ್ರಿಕವಾಗಿ ಲಸಿಕೆ ಕೊಡಿಸುವುದು ಈಗಿನ ತುರ್ತು ಅಗತ್ಯವಾಗಿದೆ ಎಂದು ಈ ಕುರಿತ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ತುರ್ತು ನಿರ್ಧಾರ ಕೈಗೊಳ್ಳಬೇಕು. ಸದ್ಯ ಲಸಿಕೆಯ ಕೊರತೆಯಿದೆ. ಹೆಚ್ಚಿನ ಪ್ರಮಾಣದಲ್ಲಿ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ಪೂರೈಸಬೇಕು.  ಸಮಸ್ಯೆಪೀಡಿತ ರಾಜ್ಯಗಳು ಪ್ರತಿಯೊಂದಕ್ಕೂ ಕೇಂದ್ರದ ಸಮ್ಮತಿಗೆ ಕಾಯುವಂತಿರಬಾರದು. ಸ್ವತಂತ್ರವಾಗಿ ಔಷಧ ಖರೀದಿಸಲು ರಾಜ್ಯಗಳಿಗೇ ಅವಕಾಶ ನೀಡಬೇಕು ಎಂದಿದ್ದಾರೆ.

ತಮಿಳುನಾಡಿನಲ್ಲಿ ಶನಿವಾರ ಹೊಸದಾಗಿ 9,344 ಪ್ರಕರಣ ವರದಿಯಾಗಿದೆ. ಒಟ್ಟು ಪ್ರಕರಣ 9.80 ಲಕ್ಷಕ್ಕೆ ಏರಿದ್ದು, ಇದುವರೆಗೂ 46.70 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು