ಬುಧವಾರ, ಮಾರ್ಚ್ 29, 2023
27 °C

ರಾಜಸ್ಥಾನ: ಬಿಜೆಪಿಯ ಮಾಜಿ ಶಾಸಕಿ ಅಮೃತಾ ಮೇಘವಾಲ್ ಕಾರಿಗೆ ಕಲ್ಲೆಸೆತ

ಪಿಟಿಐ Updated:

ಅಕ್ಷರ ಗಾತ್ರ : | |

ಜೈಪುರ: ಬಿಜೆಪಿಯ ಮಾಜಿ ಶಾಸಕಿ ಅಮೃತಾ ಮೇಘವಾಲ್ ಅವರು ಸಂಚರಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಮೇಘವಾಲ್ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಜೈಪುರದ ಬಯೋಲಾಜಿಕಲ್ ಪಾರ್ಕ್‌ ಪ್ರದೇಶದಿಂದ ಕುಟುಂಬದವರ ಜತೆ ಸಂಚರಿಸುತ್ತಿದ್ದಾಗ ಕಾರನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ ಎಂದು ಮೇಘವಾಲ್ ಆರೋಪಿಸಿರುವುದಾಗಿ ‘ಟ್ರಾನ್ಸ್‌ಪೋರ್ಟ್‌ ನಗರ’ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಗಯಾಸುದ್ದೀನ್ ಖಾನ್ ತಿಳಿಸಿದ್ದಾರೆ.

ಕಾರಿನ ಕಿಟಕಿ ಗಾಜು ಪುಡಿಯಾಗಿದ್ದು, ಮೇಘವಾಲ್ ಅವರ ಕಿವಿಗೆ ಗಾಯಗಳಾಗಿವೆ ಎಂದೂ ಅವರು ತಿಳಿಸಿದ್ದಾರೆ.

ಮೇಘವಾಲ್ ಮತ್ತು ಆರೋಪಿಗಳ ಮಧ್ಯೆ ಬಯೋಲಾಜಿಕಲ್ ಪಾರ್ಕ್‌ ಪ್ರದೇಶದಲ್ಲಿ ಮಾತಿನ ಚಕಮಕಿ ನಡೆದಿತ್ತು. ಬಳಿಕ ಅವರು ಕಾರನ್ನು ಹಿಂಬಾಲಿಸಿ ಕಲ್ಲೆಸೆದಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಘಟನೆ ಸಂಬಂಧ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು