ಭಾನುವಾರ, ನವೆಂಬರ್ 29, 2020
22 °C
ದಂಡ ಪಾವತಿಸದ ಎಂಟು ಮಂದಿ ಜೈಲಿಗೆ

ಕೃಷಿ ತ್ಯಾಜ್ಯ ಸುಟ್ಟ 30 ಮಂದಿ ರೈತರ ವಿರುದ್ಧ ಪ್ರಕರಣ ದಾಖಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಫತೇಪುರ್‌: ಎರಡು ದಿನಗಳಿಂದ ಕೃಷಿ ತ್ಯಾಜ್ಯ ಸುಡುತ್ತಿದ್ದ ಆರೋಪದ ಮೇಲೆ ಫತೇಪುರ್ ಜಿಲ್ಲೆಯ ವಿವಿಧ ಭಾಗಗಳಲ್ಲಿ 30 ರೈತರ ವಿರುದ್ಧ ಪ್ರಕರಣ ದಾಖಲಾಗಿದ್ದು, ದಂಡ ಪಾವತಿಸದ ಎಂಟು ರೈತರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೈರಾಂಪುರ ಹಳ್ಳಿಯಲ್ಲಿ ಗುರುವಾರ ಕೃಷಿ ತ್ಯಾಜ್ಯ ಸುಡುತ್ತಿದ್ದ ಎಂಟು ರೈತರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ, ಅವರಿಂದ ದಂಡ ಪಾವತಿಸಲಾಯಿತು‘ ಎಂದು ಹುಸ್ಸೇನ್‌ಗಂಜ್‌ನ ಠಾಣಾಧಿಕಾರಿ ಸತ್ಯೇಂದ್ರ ಸಿಂಗ್ ಭಡೌರಿಯಾ ತಿಳಿಸಿದ್ದಾರೆ. ಕಂದಾಯ ಅಧಿಕಾರಿಗಳು ನೀಡಿದ ವರದಿ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಉತ್ತರ ಪ್ರದೇಶ ಮತ್ತು ಪಂಜಾಬ್‌ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಬೆಳೆಯುಳಿಕೆ ಸುಡುವುದನ್ನು ನಿಷೇಧಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು