ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೇಜಸ್‌’ನಲ್ಲಿ ‘ಪಿಟಿಒ’ ಉಪಕರಣದ ಯಶಸ್ವಿ ಪರೀಕ್ಷೆ

Last Updated 14 ಮಾರ್ಚ್ 2023, 23:09 IST
ಅಕ್ಷರ ಗಾತ್ರ

ಬೆಂಗಳೂರು: ಯುದ್ಧ ವಿಮಾನಗಳಲ್ಲಿನ ಮಹತ್ವದ ಉಪಕರಣ ‘ಪಿಟಿಒ’ ಪರೀಕ್ಷೆಯನ್ನು ‘ತೇಜಸ್‌’ನಲ್ಲಿ ಮಂಗಳವಾರ ಯಶಸ್ವಿಯಾಗಿ ಇಲ್ಲಿ ನಡೆಸಲಾಯಿತು.

ಪವರ್‌ ಟೇಕ್‌ ಆಫ್‌ (ಪಿಟಿಒ) ಉಪಕರಣವು ಯುದ್ಧ ವಿಮಾನದ ಎಂಜಿನ್‌ನಿಂದ ಗೇರ್‌ಬಾಕ್ಸ್‌ಗೆ ವಿದ್ಯುತ್‌ ಅನ್ನು ಪ್ರವಹಿಸುವಲ್ಲಿ ಪ್ರಮುಖ
ಪಾತ್ರವಹಿಸುತ್ತದೆ.

ಯುದ್ಧ ವಿಮಾನಗಳಲ್ಲಿ ಮಹತ್ವದ ಉಪಕರಣವಾಗಿರುವ ‘ಪಿಟಿಒ’ ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಚೆನ್ನೈನ ಯುದ್ಧ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಸಿವಿಆರ್‌ಡಿಇ) ದೇಶಿಯವಾಗಿ ವಿನ್ಯಾಸ ರೂಪಿಸಿ, ಅಭಿವೃದ್ಧಿಪಡಿಸಲಾಗಿದೆ.

ಪಿಟಿಒ ಪರೀಕ್ಷೆ ಯಶಸ್ವಿಯಾಗಿರುವುದರಿಂದ, ಮುಂದಿನ ದಿನಗಳಲ್ಲಿ ಯುದ್ಧ ವಿಮಾನಗಳಿಗೆ ಸ್ಪರ್ಧಾತ್ಮಕ ದರದಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಇದನ್ನು ಪೂರೈಸಲು ಸಾಧ್ಯವಾಗಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಈ ಯಶಸ್ವಿ ಪರೀಕ್ಷೆಯಿಂದ ಡಿಆರ್‌ಡಿಒ ತಂತ್ರಜ್ಞಾನದಲ್ಲಿ ಮಹತ್ವದ ಸಾಧನೆ ಮಾಡಿದೆ. ಇಂತಹ ಸಾಧನೆಯನ್ನು ಕೆಲವೇ ದೇಶಗಳು ಮಾಡಿವೆ ಎಂದು ತಿಳಿಸಿದೆ.

‘ಈ ಯಶಸ್ಸು ದೇಶದ ಸಂಶೋಧನಾ ಸಾಮರ್ಥ್ಯವನ್ನು ಬಿಂಬಿಸಿದೆ’ ಎಂದು ಡಿಆರ್‌ಡಿಒ ಅಧ್ಯಕ್ಷ ಸಮೀರ್‌ ವಿ. ಕಾಮತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT