ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021ರಲ್ಲಿ ನಿತ್ಯ ಸರಾಸರಿ 450 ಮಂದಿ ಆತ್ಮಹತ್ಯೆ: ಕೇಂದ್ರ ಸರ್ಕಾರ

ಲೋಕಸಭೆಗೆ ಆಘಾತಕಾರಿ ಮಾಹಿತಿ ನೀಡಿದ ಕೇಂದ್ರ ಸರ್ಕಾರ
Last Updated 21 ಡಿಸೆಂಬರ್ 2022, 5:09 IST
ಅಕ್ಷರ ಗಾತ್ರ

ನವದೆಹಲಿ: 2021ರಲ್ಲಿ ದೇಶದಲ್ಲಿ ನಿತ್ಯ ಸರಾಸರಿ 450 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಆಘಾತಕಾರಿ ವಿಚಾರವನ್ನು ಕೇಂದ್ರ ಸರ್ಕಾರವು ಲೋಕಸಭೆಗೆ ತಿಳಿಸಿದೆ.

ಮಂಗಳವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ, 2021ರಲ್ಲಿ 1,64,033 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ)ಯ ದತ್ತಾಂಶಗಳನ್ನು ಉಲ್ಲೇಖಿಸಿ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ನಿತ್ಯ 115 ಮಂದಿ ದಿನಗೂಲಿಗಳು, 63 ಮಂದಿ ಗೃಹಿಣಿಯರು ಸೇರಿ 2021ರಲ್ಲಿ ಒಟ್ಟು 1,64,033 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಆ ವರ್ಷದಲ್ಲಿ ಒಟ್ಟಾರೆ 42,004 ದಿನಗೂಲಿ ನೌಕರರು, 23,179 ಗೃಹಣಿಯರು, 20,231 ಸ್ವ ಉದ್ಯೋಗಿಗಳು, 15,870 ವೇತನದಾರರು, 13,089 ವಿದ್ಯಾರ್ಥಿಗಳು, 12,055 ಉದ್ಯಮ ವಲಯದ ಮಂದಿ, 11,431 ಮಂದಿ ಖಾಸಗಿ ವಲಯದ ಕೆಲಸಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ಕೃಷಿ ವಲಯದ 10,881 ಮಂದಿ, 5,563 ಕೃಷಿ ಕಾರ್ಮಿಕರು, 5,318 ಮಂದಿ ರೈತರು, ತಮ್ಮ ಜಮೀನಿನಲ್ಲಿ ತಾವೇ ದುಡಿಯುತ್ತಿದ್ದ 5,318 ಜನ, ಕೃಷಿ ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದ 512 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ನೀಡಿದ ಲಿಖಿತ ಉತ್ತರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT