ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಚುವಲ್ ವಿಚಾರಣೆ ಮೂಲಭೂತ ಹಕ್ಕೆಂದು ಘೋಷಿಸಲು ಮನವಿ: ತುರ್ತು ವಿಚಾರಣೆಗೆ ನಕಾರ

Last Updated 29 ಏಪ್ರಿಲ್ 2022, 7:30 IST
ಅಕ್ಷರ ಗಾತ್ರ

ನವದೆಹಲಿ: ವರ್ಚುವಲ್ ಕೋರ್ಟ್ ವಿಚಾರಣೆಯನ್ನು ಅರ್ಜಿದಾರರ ಮೂಲಭೂತ ಹಕ್ಕೆಂದು ಘೋಷಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಮತ್ತು ಪಿ.ಎಸ್. ನರಸಿಂಹ ಅವರಿದ್ದ ನ್ಯಾಯಪೀಠವು ವಕೀಲ ಸಿದ್ಧಾರ್ಥ್ ಲೂಥರಾ ಅವರಿಗೆ ತಿಳಿಸಿದೆ.

ಕೋವಿಡ್ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿರುವುದರಿಂದ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಎಂದು ವಕೀಲರು ಮನವಿ ಮಾಡಿದ್ದರು.

‘ಸದ್ಯಕ್ಕೆ ಈ ಅನಿವಾರ್ಯತೆ ಎದುರಾಗಿಲ್ಲ. ಎಲ್ಲ ಜನರೂ ನ್ಯಾಯಾಲಯಕ್ಕೆ ಬರುತ್ತಿದ್ದಾರೆ. ಪರಿಸ್ಥಿತಿ ಹದಗೆಟ್ಟರೆ ಮುಂದೆ ನೋಡೋಣ. ಜೈಲು, ಜಾಮೀನಿನಂತಹ ಅನೇಕ ತುರ್ತು ಪ್ರಕರಣಗಳ ವಿಚಾರಣೆಯಾಗಬೇಕಿದೆ’ ಎಂದು ನ್ಯಾಯಪೀಠ ಹೇಳಿದೆ.

ವರ್ಚುವಲ್ ವಿಚಾರಣೆಯಲ್ಲಿ ಹಲವು ಸಮಸ್ಯೆಗಳಿವೆ. ನ್ಯಾಯಾಲಯಗಳು ಇದನ್ನು ಮುಂದುವರಿಸುವುದರಿಂದ ಸಮಸ್ಯೆಯಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಈ ಹಿಂದೆ ಹೇಳಿತ್ತು.

ವರ್ಚುವಲ್ ಕೋರ್ಟ್ ವಿಚಾರಣೆಯನ್ನು ಅರ್ಜಿದಾರರ ಮೂಲಭೂತ ಹಕ್ಕೆಂದು ಘೋಷಿಸುವಂತೆ ಮನವಿ ಮಾಡಿ ಸ್ವಯಂಸೇವಾ ಸಂಸ್ಥೆ ‘ನ್ಯಾಷನಲ್ ಫೆಡರೇಷನ್ ಆಫ್ ಸೊಸೈಟೀಸ್ ಫಾರ್ ಜಸ್ಟೀಸ್’ ಹಾಗೂ ಕೆಲವು ಮಂದಿ ನಾಗರಿಕರು ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT