ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯವು ಅಪರಾಧಿಯ ಮನಸ್ಥಿತಿಯನ್ನೂ ಗಮನಿಸಬೇಕು: ಸುಪ್ರೀಂ ಕೋರ್ಟ್‌

Last Updated 12 ಡಿಸೆಂಬರ್ 2021, 10:29 IST
ಅಕ್ಷರ ಗಾತ್ರ

ನವದೆಹಲಿ: ‘ನ್ಯಾಯಾಲಯಗಳು ಕೇವಲ ಅಪರಾಧದ ಸ್ವರೂಪವನ್ನಷ್ಟೇ ಅಲ್ಲ, ಅಪರಾಧಿ ಮತ್ತು ಆತನ ಮನಸ್ಥಿತಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿ ಎಲ್‌.ನಾಗೇಶ್ವರರಾವ್‌ ನೇತೃತ್ವದ ಪೀಠವು, ಅಪರಾಧಿಯ ಸುಧಾರಣೆ ಮತ್ತು ಪುನರ್ವಸತಿ ಸಾಧ್ಯತೆಗಳನ್ನೂ ಗಮನಿಸುವುದು ನ್ಯಾಯಾಲಯಗಳ ಹೊಣೆಗಾರಿಕೆಯಾಗಿದೆ ಎಂದೂ ಅಭಿಪ್ರಾಯಪಟ್ಟಿದೆ.

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮೂವರು ಸಂಬಂಧಿಕರ ಕೊಲೆ ಪ್ರಕರಣದಲ್ಲಿ ಅಪರಾಧಿಗೆ ವಿಧಿಸಿದ್ದ ಜೀವಾವಧಿ ಸಜೆಯನ್ನು 30 ವರ್ಷದ ಅವಧಿಯ ಸಜೆಗೆ ಪರಿವರ್ತಿಸಿದ ಪೀಠವು ಮೇಲಿನಂತೆ ಅಭಿಪ್ರಾಯಪಟ್ಟಿತು.

ಮೇಲ್ಮನವಿದಾರ ಬಡ ಕುಟುಂಬ ಮತ್ತು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆ ಹೊಂದಿದ್ದು, ಅಪರಾಧ ಹಿನ್ನೆಲೆಯೂ ಇಲ್ಲ. ಇದು, ಆತನ ಮೊದಲ ಅಪರಾಧ. ಕೃತ್ಯ ಗಂಭೀರವಾಗಿದ್ದರೂ, ಕಾರಾಗೃಹ ಅಧೀಕ್ಷಕರು ಅಪರಾಧಿ ವರ್ತನೆ ಕುರಿತು ನೀಡಿರುವ ವಿವರ ತೃಪ್ತಿಕರವಾಗಿಲ್ಲ ಎಂದು ಪೀಠವು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT