ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಾಂತ್‌ ಆತ್ಮಹತ್ಯೆ ಪ್ರಕರಣ: ರಿಯಾ ವಿಚಾರಣೆ ಮುಂದುವರಿಸಿದ ಸಿಬಿಐ

Last Updated 30 ಆಗಸ್ಟ್ 2020, 7:37 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ಅವರನ್ನು ಸತತ ಮೂರನೇ ದಿನವೂ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.

ಈ ವೇಳೆ ರಿಯಾ ಅವರ ಸಹೋದರ ಶೌವಿಕ್‌ ಚಕ್ರವರ್ತಿ, ಸುಶಾಂತ್‌ ಅವರ ಮ್ಯಾನೇಜರ್ ಸಾಮ್ಯುಯೆಲ್ ಮಿರಾಂದ್‌‌, ಕೆಲಸಗಾರ ಕೇಶವ್ ಅವರನ್ನೂಕೂಡ ವಿಚಾರಿಸಲಾಯಿತು.

ಸಾಂತಾಕ್ರೂಜ್‌ನ ಡಿಆರ್‌ಡಿಒ ಅತಿಥಿಗೃಹದಲ್ಲಿ ಭಾನುವಾರ ಬೆಳಿಗ್ಗೆ 10.30ಕ್ಕೆ ವಿಚಾರಣೆ ಆರಂಭವಾಯಿತು. ಪೊಲೀಸರ ಭದ್ರತೆಯೊಂದಿಗೆ ರಿಯಾ ಚಕ್ರವರ್ತಿ ಅವರನ್ನು ಅತಿಥಿಗೃಹಕ್ಕೆ ಕರೆತರಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ಕೇಂದ್ರ ತನಿಖಾ ದಳವುರಿಯಾ ಚಕ್ರವರ್ತಿ ಅವರನ್ನು ಶುಕ್ರವಾರದಿಂದ ಹಾಗೂ ಶೌವಿಕ್‌ ಅವರನ್ನು ಗುರುವಾರದಿಂದ ವಿಚಾರಣೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT