ಶುಕ್ರವಾರ, ಸೆಪ್ಟೆಂಬರ್ 25, 2020
29 °C

‘ಸಾಯುವ ಕೆಲ ಸಮಯಕ್ಕೂ ಮೊದಲು ಮಾದಕವಸ್ತು ಮಾರಾಟಗಾರನನ್ನು ಭೇಟಿಯಾಗಿದ್ದ ಸುಶಾಂತ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದೆ. ಆದರೆ ಇದೇ ಹೊತ್ತಿನಲ್ಲಿ ಬಿಜೆಪಿ ನಾಯಕ ಸುಬ್ರಮಣ್ಯಯನ್‌ ಸ್ವಾಮಿ ಅವರು ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸುಶಾಂತ್‌ ಅವರು ಸಾಯುವ ಕೆಲವೇ ಗಂಟೆಗಳ ಮೊದಲು ದುಬೈ ಮೂಲದ ಮಾದಕವಸ್ತು ಮಾರಾಟಗಾರನನ್ನು ಭೇಟಿಯಾಗಿದ್ದರು ಎಂದು ಹಿರಿಯ ರಾಜಕಾರಣಿ ಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಅವರು, ‘ಸುನಂದಾ ಪುಷ್ಕರ್‌ ಪ್ರಕರಣದಲ್ಲಿ ಏಮ್ಸ್‌ ವೈದ್ಯರು ನಡೆಸಿದ ಮರಣೋತ್ತರ ಪರೀಕ್ಷೆ ವೇಳೆ ಆಕೆಯ ಹೊಟ್ಟೆಯಲ್ಲಿ ನಿಜಾಂಶ ಪತ್ತೆಯಾಗಿತ್ತು. ಶ್ರೀದೇವಿ ಅಥವಾ ಸುಶಾಂತ್‌ ವಿಚಾರದಲ್ಲಿ ಹೀಗೆ ಮಾಡಿಲ್ಲ. ಸುಶಾಂತ್‌ ಪ್ರಕರಣದಲ್ಲಿ, ದುಬೈನ ಮಾದಕವಸ್ತು ಮಾರಾಟಗಾರ ಅಯಾಶ್‌ ಖಾನ್‌ ಎಂಬಾತ ಸುಶಾಂತ್‌ ಕೊಲೆಯಾದ ದಿನ ಅವರನ್ನು (ಸುಶಾಂತ್‌ರನ್ನು) ಭೇಟಿ ಮಾಡಿದ್ದ. ಏಕೆ?’ ಎಂದು ಪ್ರಶ್ನಿಸಿದ್ದಾರೆ.

ತನಿಖೆ ಕುರಿತು, ‘ರಿಯಾ ಚಕ್ರವರ್ತಿ ಅವರು ಮಹೇಶ್‌ ಭಟ್‌ ಅವರೊಂದಿಗೆ ನಡೆಸಿದ ಸಂಭಾಷಣೆಗೆ ವಿರುದ್ಧವಾದ ಸಾಕ್ಷ್ಯಗಳನ್ನು ನೀಡಿದರೆ, ಸತ್ಯವನ್ನು ತಿಳಿಯಲು ಸಿಬಿಐ ಆಕೆಯನ್ನು ಬಂಧಿಸಿ ಕಸ್ಟಡಿ ವಿಚಾರಣೆಗೆ ಒಳಪಡಿಸುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ’ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಸಿಬಿಐ ಸುಶಾಂತ್ ಜೊತೆ ವಾಸವಿದ್ದ ಸಿದ್ದಾರ್ಥ್‌ ಪಿಥಾನಿ, ಅಡುಗೆ ಕೆಲಸದ ನೀರಜ್ ಸಿಂಗ್ ಮತ್ತು ಸಹಾಯಕ ದೀಪೇಶ್ ಸಾವಂತ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ರಿಯಾ ಚಕ್ರವರ್ತಿಯನ್ನು ಇನ್ನೂ ಉನ್ನತ ತನಿಖೆಗೆ ಒಳಪಡಿಸಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು