ಬುಧವಾರ, ಜನವರಿ 20, 2021
27 °C

ಜಾರ್ಖಂಡ್‌ನ ಶಂಕಿತ ನಕ್ಸಲ ಸೂರತ್‌ನಲ್ಲಿ ಬಂಧನ

‍ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸೂರತ್‌: ಗುಜರಾತ್‌ನ ಸೂರತ್‌ ಜಿಲ್ಲೆಯಲ್ಲಿ ಶಂಕಿತ ನಕ್ಸಲನೊಬ್ಬನನ್ನು ಶನಿವಾರ ಬಂಧಿಸಲಾಗಿದೆ. ಜಾರ್ಖಂಡ್ ಪೊಲೀಸರಿಗೆ ಬೇಕಾಗಿದ್ದ ಈತ ಕಾರ್ಖಾನೆಯೊಂದರಲ್ಲಿ 3 ವರ್ಷದಿಂದ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನನ್ನು ಗುಡ್ಡುಸಿಂಗ್ ಎಂದು ಗುರುತಿಸಲಾಗಿದೆ. ಸೂರತ್‌ನ ಕೊಸಂಬಾ ಮತ್ತು ಜಾರ್ಖಂಡ್‌ನ ನವದಿಹಾ ಬಜಾರ್‌ ಪೊಲೀಸರು ಶನಿವಾರ ಜಂಟಿ ಕಾರ್ಯಾಚರಣೆ ನಡೆಯಿತು ಎಂದು ಪೊಲೀಸ್‌ ವರಿಷ್ಠಾಧಿಕಾರಿ ವಿ.ಕೆ ಪಟೇಲ್‌ ತಿಳಿಸಿದರು.

‘ಗುಡ್ಡು ಸಿಂಗ್‌, ಜಾರ್ಖಂಡ್‌ನ ಪಾಲಂ ಜಿಲ್ಲೆಯ ಕೊರಾಮಿ ಗ್ರಾಮದ ನಿವಾಸಿ. ಈತನ ವಿರುದ್ದ ಕೊಲೆ, ಅಪಹರಣ, ಕೊಲೆ ಯತ್ನ ಸೇರಿ ಆರು ಪ್ರಕರಣಗಳಿವೆ. ಜಾರ್ಖಂಡ್ ಪೊಲೀಸರ ವಾಂಟೆಡ್‌ ಪಟ್ಟಿಯಲ್ಲಿ ಗುಡ್ಡು ಸಿಂಗ್‌ನ ಹೆಸರೂ ಇದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು