ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ವಿಮಾನಯಾನ: ಜುಲೈ 31 ರವರೆಗೆ ನಿರ್ಬಂಧ ವಿಸ್ತರಣೆ

Last Updated 30 ಜೂನ್ 2021, 8:48 IST
ಅಕ್ಷರ ಗಾತ್ರ

ನವದೆಹಲಿ: ‘ಕೋವಿಡ್‌ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರದ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ಜುಲೈ 31 ರವರೆಗೂ ವಿಸ್ತರಿಸಲಾಗಿದೆ’ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಹೇಳಿದೆ.

ಈ ನಿಯಮವು ಅನುಮತಿ ಪಡೆದ ಸರಕು ಸಾಗಣೆ ವಿಮಾನಗಳ ಸಂಚಾರಕ್ಕೆ ಅನ್ವಯವಾಗುವುದಿಲ್ಲ.

‘ನಿರ್ದಿಷ್ಟ ಪ್ರಕರಣಗಳ ಆಧಾರದಲ್ಲಿ ಆಯ್ದ ಮಾರ್ಗಗಳಲ್ಲಿ ಅಂತರರಾಷ್ಟ್ರೀಯ ವಿಮಾನಯಾನಕ್ಕೆ ಅನುಮತಿ ನೀಡಲಾಗುವುದು’ ಎಂದು ಡಿಜಿಸಿಎ ತಿಳಿಸಿದೆ.

ಕೋವಿಡ್‌ ಪ್ರಕರಣಗಳು ಹೆಚ್ಚಿದಂತೆ 2020ರ ಮಾರ್ಚ್‌ 23ರಿಂದ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಯಾನದ ಮೇಲೆ ನಿರ್ಬಂಧ ಹೇರಲಾಗಿದೆ. 2020ರ ಮೇ ತಿಂಗಳಿನಿಂದ ‘ವಂದೇ ಭಾರತ್‌’ ಯೋಜನೆಯಡಿ ವಿಶೇಷ ವಿಮಾನಗಳು ಸಂಚರಿಸುತ್ತಿವೆ.

2020ರಜುಲೈನಲ್ಲಿ ಭಾರತವು ಅಮೆರಿಕ, ಬ್ರಿಟನ್‌, ಯುಎಇ, ಕಿನ್ಯಾ, ಭೂತಾನ್‌, ಫ್ರಾನ್ಸ್‌ ಸೇರಿದಂತೆ ಒಟ್ಟು 24 ದೇಶಗಳ ನಡುವೆವಿಶೇಷ ವಿಮಾನಗಳ ಸಂಚಾರಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ವೈಮಾನಿಕ ಒಪ್ಪಂದ (ಏರ್ ಬಬಲ್‌ ವ್ಯವಸ್ಥೆಯ ಒಪ್ಪಂದ) ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT