ಗುರುವಾರ , ಜೂನ್ 30, 2022
22 °C

ಸ್ವದೇಶಿ ಎಂದರೆ ಎಲ್ಲಾ ವಿದೇಶಿ ವಸ್ತುಗಳ ಬಹಿಷ್ಕಾರವಲ್ಲ: ಮೋಹನ್ ಭಾಗವತ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಸ್ವದೇಶಿ ಎಂದರೆ ಅಗತ್ಯವಿರುವ ಎಲ್ಲಾ ವಿದೇಶಿ ವಸ್ತುಗಳ ಬಹಿಷ್ಕಾರವಲ್ಲ. ದೇಶದಲ್ಲಿ ಕೊರತೆಯಿರುವ, ಸ್ಥಳೀಯವಾಗಿ ಲಭ್ಯವಿರದ ತಂತ್ರಜ್ಞಾನ ಅಥವಾ ವಸ್ತುಗಳನ್ನು ಮಾತ್ರ ಆಮದು ಮಾಡಿಕೊಳ್ಳಬಹುದು’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಹೇಳಿದ್ದಾರೆ.

ವರ್ಚುವಲ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ‘ಕೋವಿಡ್‌–19ರ ಹಿನ್ನೆಲೆಯಲ್ಲಿ ಸ್ವಾವಲಂಬನೆ ಮತ್ತು ಸ್ವದೇಶಿ–ಪ್ರಸ್ತುತತೆ’ ವಿಷಯ ಕುರಿತು ಮಾತನಾಡಿದ ಅವರು,‘ಜಾಗತೀಕರಣವು ಅಪೇಕ್ಷಿತ ಫಲಿತಾಂಶವನ್ನು ನೀಡಿಲ್ಲ ಮತ್ತು ಎಲ್ಲಾ ಕಡೆ ಒಂದೇ ಆರ್ಥಿಕ ಮಾದರಿಯನ್ನು ಅನ್ವಯಿಸಲಾಗದು ಎಂಬುದನ್ನು ಈ ಸಾಂಕ್ರಾಮಿಕ ರೋಗವು ಸ್ಪಷ್ಟಪಡಿಸಿದೆ’ ಎಂದು ಅಭಿಪ್ರಾಯಪಟ್ಟರು.

‘ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಬೆಂಬಲಿಸುತ್ತದೆ. ಸ್ವದೇಶಿ ಎಂದರೆ ಸ್ಥಳೀಯ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳಿಗೆ ಉತ್ತೇಜನ, ಆದ್ಯತೆ ನೀಡುವುದು. ಎಲ್ಲಾ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದು ಎಂದರ್ಥವಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು