ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಜ್ ಮಹಲ್‌ಗೆ ಬಾಂಬ್‌ ಬೆದರಿಕೆ; ಪ್ರವಾಸಿಗರನ್ನು ಹೊರಗೆ ಕಳುಹಿಸಿ ಭದ್ರತಾ ತಪಾಸಣೆ

Last Updated 4 ಮಾರ್ಚ್ 2021, 8:36 IST
ಅಕ್ಷರ ಗಾತ್ರ

ನವದೆಹಲಿ/ ಆಗ್ರಾ: ಬಾಂಬ್‌ ಇರುವುದಾಗಿ ಕರೆ ಬಂದ ಬೆನ್ನಲ್ಲೇ ತಾಜ್‌ ಮಹಲ್‌ ಆವರಣದಲ್ಲಿದ್ದ ಪ್ರವಾಸಿಗರನ್ನು ಖಾಲಿ ಮಾಡಿಸಲಾಗಿದೆ. ಸುಮಾರು ಸಾವಿರ ಪ್ರವಾಸಿಗರನ್ನು ಸ್ಥಳದಿಂದ ಕಳುಹಿಸಿ, ಬಾಂಬ್‌ ಪತ್ತೆಗಾಗಿ ಹುಡುಕಾಟ ನಡೆಸಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ತಾಜ್‌ ಮಹಲ್‌ನಲ್ಲಿ ಬಾಂಬ್ ಇರುವುದಾಗಿ ಬಂದ ಕರೆಯು ಆತಂಕ ಸೃಷ್ಟಿಸಿತ್ತು. ಅನಾಮಿಕ ವ್ಯಕ್ತಿಯೊಬ್ಬ ಉತ್ತರ ಪ್ರದೇಶ ಪೊಲೀಸರ 112 ತುರ್ತು ಸ್ಪಂದಿಸುವ ಸಂಖ್ಯೆಗೆ ಬೆಳಿಗ್ಗೆ 9ಕ್ಕೆ ಕರೆ ಮಾಡಿ, ಭಾರತೀಯ ಪುರಾತತ್ವ ಇಲಾಖೆ ನಿರ್ವಹಣೆಯಲ್ಲಿರುವ ಆಗ್ರಾದ ತಾಜ್‌ ಮಹಲ್‌ ಒಳಗೆ ಬಾಂಬ್‌ ಇರುವುದಾಗಿ ಮಾಹಿತಿ ನೀಡಿದ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಸಿಬ್ಬಂದಿ ತಾಜ್‌ ಮಹಲ್‌ ಭದ್ರತೆ ವಹಿಸಿದ್ದು, ಪೊಲೀಸರು ಕೂಡಲೇ ಸಿಐಎಸ್‌ಎಫ್‌ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಪ್ರವಾಸಿಗರನ್ನು ಹೊರಗೆ ಕಳುಹಿಸಿದ ಭದ್ರತಾ ಸಿಬ್ಬಂದಿ 9:15ಕ್ಕೆ ಬಾಂಬ್‌ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ.

'ಬಹುತೇಕ ಪರಿಶೀಲನೆ ಪೂರ್ಣಗೊಂಡಿದ್ದು, ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ' ಎಂದು ಸಿಐಎಸ್‌ಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಫಿರೋಜಾಬಾದ್‌ನಿಂದ ಸುಳ್ಳು ಬೆದರಿಕೆ ಕರೆ ಬಂದಿರುವುದಾಗಿ ಪತ್ತೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT