ಸೋಮವಾರ, ನವೆಂಬರ್ 30, 2020
24 °C

ತಮಿಳುನಾಡು: ಬಿಜೆಪಿ ನಾಯಕಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಖುಷ್ಬೂ ಸುಂದರ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವುದು

ಮೇಲ್‌ಮರವತ್ತೂರ್‌: ತಮಿಳುನಾಡು ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್‌ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಬುಧವಾರ ಬೆಳಿಗ್ಗೆ ಮೇಲ್‌ಮರವತ್ತೂರ್ ಸಮೀಪ ಟ್ಯಾಂಕರ್‌ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರಿಗೆ ಗುದ್ದಿದೆ.

ಯಾವುದೇ ಅಪಾಯವಿಲ್ಲದೆ ಅವರು ಪಾರಾಗಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದು, ಖುಷ್ಬೂ ಕಡಲೂರು ಕಡೆಗೆ ಪ್ರಯಾಣ ಮುಂದುವರಿಸಿದ್ದಾರೆ.

'ಮೇಲ್‌ಮರವತ್ತೂರ್‌ ಸಮೀಪ ಅಪಘಾತವಾಗಿದೆ. ಟ್ಯಾಂಕರ್ ಒಂದು ಕಾರಿಗೆ ಗುದ್ದಿದೆ. ನಿಮ್ಮೆಲ್ಲರ ಆಶೀರ್ವಾದ ಹಾಗೂ ದೇವರ ಕೃಪೆಯಿಂದ ನಾನು ಸುರಕ್ಷಿತವಾಗಿದ್ದೇನೆ. ಕಡೂರು ಕಡೆಗೆ ನನ್ನ ಪ್ರಯಾಣ ಮುಂದುವರಿಸುತ್ತಿದ್ದೇನೆ, ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ನನ್ನ ಪತಿ ನಂಬಿರುವ ದೇವರು ಮುರುಗನ್‌ ನಮ್ಮನ್ನು ಬದುಕಿಸಿದ...' ಎಂದು ಅವರು ಟ್ವೀಟಿಸಿದ್ದಾರೆ.


ಖುಷ್ಬೂ ಸುಂದರ್‌

'ನಮ್ಮ ಕಾರು ಸರಿಯಾದ ಮಾರ್ಗದಲ್ಲಿಯೇ ಸಾಗುತ್ತಿತ್ತು, ಎಲ್ಲಿಂದಲೋ ಬಂದ ಟ್ಯಾಂಕರ್‌ ಕಾರಿನತ್ತ ನುಗ್ಗಿತು. ಪೊಲೀಸರು ಚಾಲಕನನ್ನು ಪ್ರಶ್ನಿಸುತ್ತಿದ್ದಾರೆ, ತನಿಖೆ ಮುಂದುವರಿಸಿದ್ದಾರೆ' ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು