ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ರಾಷ್ಟ್ರ, ಒಂದು ನೋಂದಣಿಗೆ ತಮಿಳುನಾಡು ಸಿಎಂ ವಿರೋಧ

Last Updated 13 ಫೆಬ್ರುವರಿ 2022, 1:30 IST
ಅಕ್ಷರ ಗಾತ್ರ

ಚೆನ್ನೈ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ‘ಒಂದು ರಾಷ್ಟ್ರ, ಒಂದು ನೋಂದಣಿ’ ಯೋಜನೆಯನ್ನು ವಿರೋಧಿಸುವುದಾಗಿ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿರುವ ‘ಒಂದು ರಾಷ್ಟ್ರ, ಒಂದು ನೋಂದಣಿ’ಯಂತಹ ಕಾರ್ಯಕ್ರಮಗಳ ಮೂಲಕ ಬಿಜೆಪಿ ತನ್ನ ಅಜೆಂಡಾವನ್ನು ರಾಷ್ಟ್ರದ ಜನರ ಮೇಲೆ ಹೇರುತ್ತಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.

ಒಂದೇ ಆಡಳಿತದ ಅಡಿಯಲ್ಲಿ ರಾಷ್ಟ್ರವನ್ನು ತರಲು ಯತ್ನಿಸುವುದು ಮತ್ತು ಏಕಸ್ವಾಮ್ಯ ಸಾಧಿಸಲು ಬಿಜೆಪಿ ಮುಂದಾಗಿದೆ ಎಂದು ತಮಿಳುನಾಡು ಸಿಎಂ ಆರೋಪಿಸಿದ್ದಾರೆ.

ಇದರಿಂದ ಜನರಿಗೆ ಏನೂ ಪ್ರಯೋಜನವಾಗದು ಎಂದಿರುವ ಸ್ಟಾಲಿನ್, ಈ ಬಗ್ಗೆ ಸುಮಾರು 50ಕ್ಕೂ ಅಧಿಕ ನಾಯಕರಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT