ಶನಿವಾರ, ಜುಲೈ 2, 2022
20 °C

ರಷ್ಯಾ: ಶಿಶು ವಿಹಾರದಲ್ಲಿ ಗುಂಡಿನ ದಾಳಿ– ಇಬ್ಬರು ಮಕ್ಕಳು, ಶಿಕ್ಷಕ ಸಾವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮಾಸ್ಕೋ: ರಷ್ಯಾದ ಕೇಂದ್ರ ಉಲಿಯಾನೋವಸ್ಕ್ ಪ್ರದೇಶದ ಶಿಶುವಿಹಾರದಲ್ಲಿ ಮಂಗಳವಾರ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ.

‘ಪ್ರಾಥಮಿಕ ಮಾಹಿತಿಯ ಪ್ರಕಾರ, ಇಬ್ಬರು ಮಕ್ಕಳು, ಶಿಕ್ಷಕ ಮತ್ತು ದಾಳಿಕೋರ ಸಾವಿಗೀಡಾಗಿದ್ದಾನೆ’ಎಂದು ಉಲಿಯಾನೋವಸ್ಕ್‌ ಪ್ರದೇಶದ ಮಾಹಿತಿ ವಿಭಾಗದ ಮುಖ್ಯಸ್ಥ ಡಿಮಿಟ್ರಿ ಕಮಲ್ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ಅಧಿಕಾರಿಗಳು ಘಟನಾ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಮೃತಪಟ್ಟ ಮಕ್ಕಳು ಮೂರರಿಂದ ಆರು ವರ್ಷದೊಳಗಿನವರು ಎಂದು ಕಮಲ್ ಹೇಳಿದರು.

‘ದೇಶೀಯ ಘರ್ಷಣೆಯ‘ಪರಿಣಾಮವಾಗಿ ಗುಂಡಿನ ದಾಳಿ ನಡೆದಿರಬಹುದು ಎಂದು ಕಾನೂನು ಜಾರಿ ವಿಭಾಗದ ಮೂಲವೊಂದು ಸುದ್ದಿ ಸಂಸ್ಥೆ ಟಾಸ್‌ಗೆ ತಿಳಿಸಿದೆ.

ರಷ್ಯಾದ ಕಾನೂನು ಜಾರಿ ವಿಭಾಗದ ಅಧಿಕೃತ ಟೆಲಿಗ್ರಾಮ್ ಚಾನಲ್ ಬಾಜ ಪ್ರಕಾರ, ದಾಳಿ ನಡೆಸಿದ ವ್ಯಕ್ತಿ ಐಝೆಡ್‌ಎಕ್ಸ್-27 ಡಬಲ್ ಬ್ಯಾರೆಲ್ ಶಾಟ್‌ಗನ್‌ ಬಳಸಿದ್ದು, ಮಕ್ಕಳು ಕಿರುನಿದ್ರೆ ಮಾಡುತ್ತಿದ್ದ ಸಮಯದಲ್ಲಿ ಶಿಶುವಿಹಾರಕ್ಕೆ ನುಗ್ಗಿದ್ದಾನೆ. ಕಾವಲುಗಾರನಿಲ್ಲದ ಸಮಯ ನೋಡಿ ದಾಳಿ ನಡೆಸಿದ್ದಾನೆ.

ದಾಳಿಯಲ್ಲಿ ಯುವ ಶಿಕ್ಷಕ ಸಾವಿಗೀಡಾಗಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಈ ಪ್ರದೇಶದ ಮಾಜಿ ಗವರ್ನರ್, ಸಂಸದ ಸೆರ್ಗೆಯ್ ಮೊರೊಜೊವ್ ಅವರು ಹೇಳಿದ್ದಾರೆ.

ಗುಂಡಿನ ದಾಳಿ ಬಳಿಕ ಶೂಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೊರೊಜೊವ್ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು