ಸೋಮವಾರ, ಅಕ್ಟೋಬರ್ 3, 2022
24 °C

ನೂಪರ್‌ ಶರ್ಮಾ ಹತ್ಯೆಗೆ ಜೆಇಎಂ ಸಂಘಟನೆಯಿಂದ ನಿಯೋಜನೆಗೊಂಡಿದ್ದ ಉಗ್ರನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ:  ಪ್ರವಾದಿ ಮಹಮದ್ದರ ಅವಹೇಳನ ಆರೋಪದಲ್ಲಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್‌ ಶರ್ಮಾ ಅವರ ಹತ್ಯೆಗಾಗಿ ಜೈಶ್‌ ಎ ಮೊಹಮ್ಮದ್‌ ಸಂಘಟನೆಯಿಂದ ನಿಯೋಜನೆಯಾಗಿದ್ದ ಉಗ್ರಗಾಮಿಯೊಬ್ಬನನ್ನು ಉತ್ತರ ಪ್ರದೇಶದ ಭಯೋತ್ಪಾದನ ನಿಗ್ರಹ ದಳ (ಎಟಿಎಸ್‌) ಬಂಧಿಸಿದೆ. 

ಇದನ್ನೂ ಓದಿ: 

ಬಂಧಿತ ಉಗ್ರನನ್ನು ಮುಹಮ್ಮದ್‌ ನದೀಮ್‌ ಎಂದು ಗುರುತಿಸಲಾಗಿದೆ. 

ಈತ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳಾದ ಜೆಇಎಂ ಮತ್ತು ತೆಹ್ರೀಕ್– ಇ– ತಾಲಿಬಾನ್ ಪಾಕಿಸ್ತಾನ  (ಟಿಟಿಪಿ)ಯೊಂದಿಗೆ ನೇರ ಸಂಪರ್ಕದಲ್ಲಿದ್ದ ಎಂದು ಎಟಿಎಸ್‌ ತಿಳಿಸಿದೆ. 

ನೂಪುರ್‌ ಶರ್ಮಾ ಅವರನ್ನು ಹತ್ಯೆ ಮಾಡುವ ಕೆಲಸವನ್ನು ನದೀಮ್‌ಗೆ ವಹಿಸಲಾಗಿತ್ತು ಎಂದು ಎಟಿಎಸ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು