ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಕೋವಿಡ್ 3ನೇ ಅಲೆ: ಫೆಬ್ರುವರಿಯಲ್ಲಿ ಉತ್ತುಂಗಕ್ಕೆ- ಅಧ್ಯಯನ

Last Updated 22 ಡಿಸೆಂಬರ್ 2021, 16:18 IST
ಅಕ್ಷರ ಗಾತ್ರ

ನವದೆಹಲಿ: ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಕೋವಿಡ್ 3ನೇ ಅಲೆ ಆರಂಭವಾಗಿದ್ದು, ಮುಂದಿನ ವರ್ಷದ ಫೆಬ್ರುವರಿಯಲ್ಲಿ ಉತ್ತುಂಗಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ವಿಜ್ಞಾನಿಗಳು ನಡೆಸಿರುವ ಅಧ್ಯಯನವೊಂದುಹೇಳಿದೆ.

ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ ಸಂಶೋಧಕರ ತಂಡವು ಈ ಅಧ್ಯಯನ ನಡೆಸಿದ್ದು, ಇನ್ನಷ್ಟೆ ಉನ್ನತ ತಜ್ಞರಿಂದ ಪರಾಮರ್ಶೆಗೆ ಒಳಪಡಬೇಕಿದೆ.

ಸಾಂಕ್ರಾಮಿಕದ ಮೊದಲ ಎರಡು ಅಲೆಗಳ ಡೇಟಾವನ್ನು ಬಳಸಿಕೊಂಡು ಮೂರನೇ ಅಲೆಯ ಮುನ್ಸೂಚನೆಯನ್ನು ನೀಡಲಾಗಿದೆ. ತಂಡವು ಈಗಾಗಲೇ ಮೂರನೇ ಅಲೆಯನ್ನು ಎದುರಿಸುತ್ತಿರುವ ವಿವಿಧ ದೇಶಗಳ ಡೇಟಾವನ್ನು ಬಳಸಿಕೊಂಡಿದೆ. ಆ ದೇಶಗಳ ದೈನಂದಿನ ಪ್ರಕರಣಗಳ ಏರಿಕೆಯ ಡೇಟಾವನ್ನು ಬಳಸಿಕೊಂಡು ಭಾರತದಲ್ಲಿ ಮೂರನೇ ತರಂಗದ ಪರಿಣಾಮ ಮತ್ತು ಟೈಮ್‌ಲೈನ್ ಅನ್ನು ಊಹಿಸಲಾಗಿದೆ.

‘ಭಾರತದಲ್ಲಿ ಕೋವಿಡ್ -19 ಮೂರನೇ ಅಲೆಯು 2021ರ ಡಿಸೆಂಬರ್ ಮಧ್ಯದಲ್ಲಿ ಪ್ರಾರಂಭವಾಗಿದ್ದು, ಫೆಬ್ರವರಿ 2022ರ ಆರಂಭದಲ್ಲಿ ಉತ್ತುಂಗಕ್ಕೇರಲಿದೆ ಎಂದು ವರದಿಯು ಮುನ್ಸೂಚಿಸುತ್ತದೆ" ಎಂದು ಗಣಿತ ಮತ್ತು ಅಂಕಿಅಂಶ ವಿಭಾಗದ ಸಹ ಪ್ರಾಧ್ಯಾಪಕ ಸುಭ್ರಾ ಶಂಕರ್ ಧಾರ್ ದಿನಪತ್ರಿಕೆಯಲ್ಲಿ ಬರೆದಿದ್ದಾರೆ.

ಹೈದರಾಬಾದ್ ಮತ್ತು ಕಾನ್ಪುರದ ಐಐಟಿಯ ತಂಡಗಳು ನಡೆಸಿದ ಅಧ್ಯಯನದಲ್ಲಿ ‘ಸೂತ್ರ’ ಮಾದರಿಯನ್ನು ಬಳಸಲಾಗಿದೆ.

ಐಐಟಿ ಹೈದರಾಬಾದ್‌ನ ಪ್ರೊಫೆಸರ್ ಎಂ ವಿದ್ಯಾಸಾಗರ್ ಮತ್ತು ಐಐಟಿ ಕಾನ್ಪುರದ ಮಣಿಂದಾ ಅಗರವಾಲ್ ಪ್ರಕಾರ, ಓಮೈಕ್ರಾನ್ ರೂಪಾಂತರವು ಡೆಲ್ಟಾಗಿಂತ ಪ್ರಬಲ ರೂಪಾಂತರವಾಗಿ ಹರಡಲು ಪ್ರಾರಂಭಿಸಿರುವುದರಿಂದ ದೈನಂದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT