ಮಂಗಳವಾರ, ಅಕ್ಟೋಬರ್ 27, 2020
23 °C

ಅಭಿವೃದ್ಧಿ ಬಯಸದವರು ಕೋಮು, ಜಾತಿ ದಂಗೆ ಪ್ರಚೋದಿಸಲು ಬಯಸುತ್ತಾರೆ: ಆದಿತ್ಯನಾಥ 

ಪಿಟಿಐ Updated:

ಅಕ್ಷರ ಗಾತ್ರ : | |

yogi adityanath

ಲಖನೌ: ಹಾಥರಸ್ ಸಾಮೂಹಿಕ ಅತ್ಯಾಚಾರ ಪ್ರಕರಣ ವಿಷಯದಲ್ಲಿ ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ವಿಪಕ್ಷಗಳು ಗಲಭೆಗಳನ್ನು ಪ್ರಚೋದಿಸಲು ಮತ್ತು ಅಭಿವೃದ್ಧಿಗೆ ಅಡ್ಡಿಯುಂಟುಮಾಡಲು ಹೊಸ ಪಿತೂರಿಗಳಲ್ಲಿ ತೊಡಗಿವೆ ಎಂದಿದ್ದಾರೆ. 

ಅಭಿವೃದ್ಧಿ ಕಾರ್ಯಗಳನ್ನು ಬಯಸದವರು ಕೋಮು,ಜಾತಿ  ದಂಗೆ ಪ್ರಚೋದಿಸಲು ಬಯಸುತ್ತಾರೆ ಎಂದು ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಆದಿತ್ಯನಾಥ ಹೇಳಿದ್ದಾರೆ.

ಅವರು (ವಿಪಕ್ಷಗಳು) ಗಲಭೆಯಿಂದ ರಾಜಕೀಯ ಪ್ರಚಾರ ಪಡೆಯುತ್ತಾರೆ. ಹಾಗಾಗಿ ಅವರು ಹೊಸ ಪಿತೂರಿಗಳಲ್ಲಿ ತೊಡಗುತ್ತಾರೆ. ಈ ಎಲ್ಲಾ ಪಿತೂರಿಗಳ ವಿರುದ್ಧ ನಾವು ಜಾಗರೂಕರಾಗಿರಬೇಕು ಮತ್ತು ಅಭಿವೃದ್ಧಿ ಪ್ರಕ್ರಿಯೆಯನ್ನು ವೇಗಗೊಳಿಸಬೇಕು ಎಂದಿದ್ದಾರೆ ಯೋಗಿ.

ಏತನ್ಮಧ್ಯೆ, ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಆನ್‌ನೈನ್ ಸಂವಾದದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಕಾಂಗ್ರೆಸ್ ಇತರ ರಾಜಕೀಯ ಪಕ್ಷಗಳು ಸುಳ್ಳು ಮತ್ತು ಮೋಸದಿಂದ ಜನರ ಹಾದಿ ತಪ್ಪಿಸಲು ಪಿತೂರಿಗಳನ್ನು ನಡೆಸುತ್ತಿದೆ. ಅವರು ಯಾವ ರೀತಿ ಆಡಳಿತ ನಡೆಸಿದರು ಮತ್ತು ಸಾರ್ವಜನಿಕ ಆಸ್ತಿಯನ್ನು ಯಾವ ರೀತಿ ಕಬಳಿಸಿದರು ಎಂಬುದನ್ನು ಇಲ್ಲಿನ ಜನರು ನೋಡಿದ್ದಾರೆ. ರಾಜ್ಯದಲ್ಲಿ ಮುಂಬರುವ ಉಪಚುನಾವಣೆಗಳಿಗೆ ಸಜ್ಜಾಗಲು  ಈ ಪಿತೂರಿಗಳನ್ನು ನಡೆಸುತ್ತಿರುವವರ ವಿಶ್ವಾಸವನ್ನು ಕೆಡವಬೇಕೆಂದು ಹೇಳಿದ್ದಾರೆ.

ಹಾಥರಸ್‌ನಲ್ಲಿ 19 ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ರಾಜ್ಯ  ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ. 

ಇದನ್ನೂ ಓದಿ: ಹಾಥರಸ್ ಅತ್ಯಾಚಾರ ಪ್ರಕರಣ ಸಿಬಿಐ ತನಿಖೆಗೆ ವಹಿಸಿದ ಯೋಗಿ ಆದಿತ್ಯನಾಥ್ ಸರ್ಕಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು