ಶುಕ್ರವಾರ, ಮಾರ್ಚ್ 5, 2021
27 °C

ಇಂಡೊನೇಷ್ಯಾದಲ್ಲಿ ಪ್ರವಾಹ:ಸುರಕ್ಷಿತ ಸ್ಥಳಕ್ಕೆ ಸಂತ್ರಸ್ತರ ಸ್ಥಳಾಂತರ

ಎಪಿ Updated:

ಅಕ್ಷರ ಗಾತ್ರ : | |

Prajavani

ಬೇಕಸಿ (ಇಂಡೊನೇಷ್ಯಾ): ಧಾರಾಕಾರ ಮಳೆ ಮತ್ತು ಸಿಟರಂ ನದಿ ಒಡ್ಡು ಒಡೆದು ಉಂಟಾದ ಪ್ರವಾಹ ಪರಿಸ್ಥಿತಿಯಿಂದಾಗಿ ಇಂಡೊನೇಷ್ಯಾದ ಬೇಕಸಿ ಜಿಲ್ಲೆಯಲ್ಲಿ ಸಾವಿರಾರು ನಿವಾಸಿಗಳಿಗೆ ಸಮಸ್ಯೆಯಾಗಿದೆ. ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಪಶ್ಚಿಮ ಜಾವಾ ಪ್ರಾಂತ್ಯದಲ್ಲಿನ ಬೇಕಸಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿದ್ದು, ನದಿ ಉಕ್ಕಿ ಹರಿದಿತ್ತು. ‘ನೀರಾವರಿ ಯೋಜನೆಯ ಕಾಮಗಾರಿಗಳು ಹಾಗೂ ಕೆಲವೆಡೆ ಒಡ್ಡು ಒಡೆದಿವೆ’ ಎಂದು ಸಚಿವ ಬಸುಕಿ ಹಡಿಮುಲ್ಜೊನೊ ಅವರು ಸೋಮವಾರ ತಿಳಿಸಿದರು.

ರಕ್ಷಣಾ ಕಾರ್ಯಗಳಿಗಾಗಿ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ತಂಡದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿರ್ವಹಣಾ ಸಂಸ್ಥೆಯ ವಕ್ತಾರ ರಡಿತ್ಯಾ ಜಟಿ ಅವರ ಪ್ರಕಾರ, ನಾಲ್ಕು ಗ್ರಾಮಗಳಿಂದ ಸುಮಾರು 28 ಸಾವಿರ ನಿವಾಸಿಗಳು ಸಂತ್ರಸ್ತರಾಗಿದ್ದು, 4,184 ಜನರನ್ನು ಸ್ಥಳಾಂತರಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು