ಬುಧವಾರ, ಅಕ್ಟೋಬರ್ 28, 2020
17 °C

ಉತ್ತರ ಪ್ರದೇಶ: ಮೂರು ಚಿರತೆ ಮರಿಗಳು ಅನಾರೋಗ್ಯದಿಂದ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಟಾವಾ (ಉತ್ತರ‍ಪ್ರದೇಶ): ಬಿಜ್ನೋರ್‌ನಿಂದ ಇಟಾವಾ ಸಫಾರಿ ಪಾರ್ಕ್‌ಗೆ ಕರೆತಂದಿದ್ದ ಮೂರು ಚಿರತೆ ಮರಿಗಳು ಅನಾರೋಗ್ಯದಿಂದ ಮೃತಪಟ್ಟಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

‘ವಾರದ ಹಿಂದೆ ಇಲ್ಲಿಗೆ ಚಿರತೆ ಮರಿಗಳನ್ನು ಕರೆತರಲಾಗಿತ್ತು. ಆದರೆ ಭಾನುವಾರ ಮರಿಗಳ ಆರೋಗ್ಯ ಹದಗೆಟ್ಟಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವು ಸೋಮವಾರ ಸಾವನ್ನಪ್ಪಿವೆ’ ಎಂದು ಕಾನ್ಪುರ ಮೃಗಾಲಯದ ನಿರ್ದೇಶಕ ಆರ್‌.ಕೆ ಸಿಂಗ್ ಅವರು ಹೇಳಿದರು.

‘ಬರೇಲಿಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಚಿರತೆ ಮರಿಗಳ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು