ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕವಸ್ತು ಕಳ್ಳಸಾಗಣೆ: ಬಿಎಸ್‌ಎಫ್‌ನಿಂದ ಮೂವರು ಪಾಕ್‌ ಪ್ರಜೆಗಳ ಹತ್ಯೆ

Last Updated 6 ಫೆಬ್ರುವರಿ 2022, 10:52 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮುವಿನ ಸಾಂಬಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಗೆ ಯತ್ನಿಸುತ್ತಿದ್ದ ಮೂವರು ಪಾಕಿಸ್ತಾನ ಪ್ರಜೆಗಳನ್ನು ಬಿಎಸ್‌ಎಫ್‌ ಯೋಧರು ಭಾನುವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

‘ಮೃತರ ಬಳಿ ಇದ್ದ ₹ 180 ಕೋಟಿ ಮೌಲ್ಯದ, ಅಂದಾಜು 36 ಕೆ.ಜಿಯಷ್ಟು ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಮಾದಕವಸ್ತು ಹೆರಾಯಿನ್ ಎಂದು ಶಂಕಿಸಲಾಗಿದ್ದು, ಪರಿಶೀಲನೆ ನಡೆದಿದೆ’ ಎಂದು ಬಿಎಸ್‌ಎಫ್‌ ವಕ್ತಾರರೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಹತ್ಯೆ ಮಾಡಲಾಗಿರುವವರ ದೇಹಗಳನ್ನು ಇನ್ನೂ ವಶಪಡಿಸಿಕೊಳ್ಳಬೇಕಿದ್ದು, ಘಟನೆ ನಡೆದ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಈ ಕಾರ್ಯಾಚರಣೆಯೊಂದಿಗೆ ದೊಡ್ಡ ಪ್ರಮಾಣದ ಮಾದಕವಸ್ತು ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿದಂತಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

‘ಕಾಶ್ಮೀರಿ ಯುವಕರನ್ನು ಮಾದಕವಸ್ತುಗಳ ವ್ಯಸನಿಗಳನ್ನಾಗಿಸಲು ಪಾಕಿಸ್ತಾನ ಯತ್ನಿಸುತ್ತಿದೆ. ಇಷ್ಟು ವರ್ಷಗಳ ವರೆಗೆ ಪಂಜಾಬ್‌ನಲ್ಲಿ ಮಾಡಿದಂತಹ ಕೃತ್ಯಗಳನ್ನೇ ಕಾಶ್ಮೀರದಲ್ಲಿ ಮುಂದುವರಿಸಲು ಆ ದೇಶ ಯತ್ನಿಸುತ್ತಿದೆ’ ಎಂದು ಜಮ್ಮು–ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ದಿಲ್‌ಬಾಗ್ ಸಿಂಗ್‌ ಅವರು ಕಳೆದ ವರ್ಷ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT