ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕಳೆದ ವರ್ಷ 15 ಹುಲಿಗಳ ಸಾವು; ಮಧ್ಯ ಪ್ರದೇಶದಲ್ಲಿ 34 ಮೃತ

Last Updated 8 ಜನವರಿ 2023, 11:29 IST
ಅಕ್ಷರ ಗಾತ್ರ

ನವದೆಹಲಿ: 2022ನೇ ವರ್ಷದಲ್ಲಿ ಕರ್ನಾಟಕ ರಾಜ್ಯದಲ್ಲಿ 15 ಹುಲಿಗಳು ಸಾವನ್ನಪ್ಪಿದರೆ, ಮಧ್ಯ ಪ್ರದೇಶದಲ್ಲಿ 34 ಹುಲಿಗಳು ಮೃತಪಟ್ಟಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ತಿಳಿಸಿದೆ.

ಸದ್ಯ ಮಧ್ಯ ಪ್ರದೇಶ ಭಾರತದ ಹುಲಿಗಳ ರಾಜ್ಯ ಸ್ಥಾನಮಾನವನ್ನು ಉಳಿಸಿಕೊಳ್ಳುವ ಸವಾಲನ್ನು ಎದುರಿಸುತ್ತಿದೆ. ಇಲ್ಲಿ ಒಂದೇ ವರ್ಷದಲ್ಲಿ 35 ಹುಲಿಗಳು ಸಾವನ್ನಪ್ಪಿವೆ. ಕರ್ನಾಟಕವು ಭಾರತದ ಹುಲಿಗಳ ರಾಜ್ಯ ಎಂಬ ಸ್ಥಾನಮಾನಕ್ಕೆ ಮಧ್ಯ ಪ್ರದೇಶದ ಜೊತೆ ತೀವ್ರ ಪೈಪೋಟಿ ನಡೆಸುತ್ತಿದೆ.

2018ರ ಹುಲಿ ಗಣತಿಯ ಪ್ರಕಾರ ರಾಜ್ಯದಲ್ಲಿ 524 ಹುಲಿಗಳು ನೆಲೆಸಿವೆ. ಹಾಗೇ ಮಧ್ಯ ಪ್ರದೇಶದಲ್ಲಿ 526 ಹುಲಿಗಳು ವಿವಿಧ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿವೆ. ಕಳೆದ ವರ್ಷ ಕರ್ನಾಟಕದಲ್ಲಿ 15, ಮಧ್ಯ ಪ್ರದೇಶದಲ್ಲಿ 34 ಹುಲಿಗಳು ಮೃತಪಟ್ಟಿವೆ. ಈ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ ಭಾರತದ ಹುಲಿಗಳ ರಾಜ್ಯ ಸ್ಥಾನಮಾನವನ್ನು ಉಳಿಸಿಕೊಳ್ಳುವ ಸವಾಲನ್ನು ಎದುರಿಸುತ್ತಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಹುಲಿಗಳ ಸಾವಿಗೆ ಕಾರಣಗಳನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಉಲ್ಲೇಖಿಸಿಲ್ಲ. ಪ್ರತಿ ನಾಲ್ಕು ವರ್ಷಗಳಿಗೆ ಹುಲಿ ಗಣತಿಯನ್ನು ನಡೆಸಲಾಗುತ್ತದೆ. 2022ರಲ್ಲಿ ಗಣತಿ ನಡೆಸಲಾಗಿದ್ದು ಅದರ ವರದಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ.

2018ರ ಗಣತಿ ಪ್ರಕಾರ ದೇಶದಲ್ಲಿ 2967 ಹುಲಿಗಳು ನೆಲೆಸಿವೆ. ಮಧ್ಯ ಪ್ರದೇಶದಲ್ಲಿ 526 ಹುಲಿಗಳಿದ್ದು, ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಭಾರತದ ಹುಲಿಗಳ ರಾಜ್ಯ ಎಂಬ ಬಿರುದನ್ನು ಪಡೆದಿದೆ. ನಂತರದ ಸ್ಥಾನದಲ್ಲಿ ಕರ್ನಾಟಕ ರಾಜ್ಯವಿದ್ದು ಇಲ್ಲಿ 524 ಹುಲಿಗಳಿವೆ.

ವೆಬ್‌ಸೈಟ್‌: https://ntca.gov.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT