ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯವರೆಗೂ ಕಾಶಿಯ ಜನರು ನನ್ನನ್ನು ಬಿಡುವುದಿಲ್ಲ: ಅಖಿಲೇಶ್‌ಗೆ ಮೋದಿ ತಿರುಗೇಟು

Last Updated 27 ಫೆಬ್ರುವರಿ 2022, 16:12 IST
ಅಕ್ಷರ ಗಾತ್ರ

ವಾರಾಣಸಿ: ತಮ್ಮನ್ನು ಉದ್ದೇಶಿಸಿ 'ಕೊನೆಗಾಲ ಸಮೀಪಿಸಿದಾಗ ವಾರಾಣಸಿಗೆ ಬರಬೇಕು' ಎಂದು ಹೇಳಿದ್ದಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.

ವಾರಣಾಸಿಯಲ್ಲಿ ನಡೆದ ಬಿಜೆಪಿಯ ಬೂತ್ ಮಟ್ಟದ ವಿಜಯ ಸಮ್ಮೇಳನದಲ್ಲಿ ಮಾತನಾಡಿದ ಮೋದಿ, 'ನಾನು ಯಾರೊಬ್ಬರನ್ನೂ ವೈಯಕ್ತಿಕವಾಗಿ ಟೀಕಿಸಲು ಬಯಸುವುದಿಲ್ಲ. ಆದರೆ, ಕಾಶಿಯಲ್ಲಿದ್ದಾಗಲೇ ನನಗೆ ಸಾವು ಬರಲಿ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದರಿಂದ, ನನಗೆ ನಿಜವಾಗಿಯೂ ಬಹಳ ಸಂತೋಷವಾಗಿದೆ. ನನ್ನ ಹೃದಯ ತುಂಬಾಶಾಂತವಾದಂತೆ ಭಾಸವಾಗುತ್ತಿದೆ. ಕಾಶಿಯ ಜನರು ನನಗೆ ಎಷ್ಟು ಪ್ರೀತಿ ನೀಡಿದ್ದಾರೆ ಎಂಬುದನ್ನು ನನ್ನ ವಿರೋಧಿಗಳೂ ತಿಳಿದಿದ್ದಾರೆ. ಈ ಜನರು ನನ್ನ ಬಯಕೆಗಳನ್ನು ಪರಿಪೂರ್ಣಗೊಳಿಸಿದ್ದಾರೆ. ಕಾಶಿ ಅಥವಾ ಕಾಶಿಯ ಜನರು ನನ್ನನ್ನು ಕೊನೆಯವರೆಗೂ ಕೈಬಿಡುವುದಿಲ್ಲ ಎಂಬುದುಇದರರ್ಥ' ಎಂದು ಹೇಳಿದ್ದಾರೆ.

ಬಿಜೆಪಿಯು ಮಹಾದೇವ ಹಾಗೂ ಗಂಗಾಮಾತೆಯ ಪಾದದ ಬಳಿ ಕುಳಿತು ಕಾಶಿಯ ಸೇವೆ ಮಾಡುವ ಶ್ರೇಷ್ಠ ಅವಕಾಶವನ್ನು ಕಲ್ಪಿಸಿದೆ ಎಂದೂ ಇದೇವೇಳೆ ಹೇಳಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು 2021ರ ಡಿಸೆಂಬರ್‌ನಲ್ಲಿ ಕಾಶಿ ವಿಶ್ವನಾಥ ಕಾರಿಡಾರ್‌ಗೆ ಚಾಲನೆ ನೀಡಿದ್ದರು. ಅದನ್ನು ಉಲ್ಲೇಖಿಸಿ ಮಾತನಾಡಿದ್ದಎಸ್‌ಪಿ ನಾಯಕ ಯಾದವ್, ಇದು ತುಂಬಾ ಒಳ್ಳೇ ಕೆಲಸ. ಕೇವಲ ಒಂದು ತಿಂಗಳಲ್ಲ. ಮೋದಿಯವರು ಎರಡು, ಮೂರು ತಿಂಗಳು ಅಲ್ಲೇ ಉಳಿಯಬೇಕು. ವಾರಾಣಸಿಯು ಜನರಿಗೆ ಕೊನೆಗಾಲ ಸಮೀಪಿಸಿದಾಗ ಉಳಿದುಕೊಳ್ಳಬೇಕಾದ ಸ್ಥಳವಾಗಿದೆ ಎಂದು ಮೋದಿ ಅವರನ್ನು ಟೀಕಿಸಿದ್ದರು.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಸದ್ಯ 5 ಹಂತಗಳ (ಫೆಬ್ರುವರಿ 10, 14,20, 23 ಮತ್ತು 27ರಂದು) ಮತದಾನ ಪ್ರಕ್ರಿಯೆ ಮುಗಿದಿದೆ. ಮಾರ್ಚ್‌ 3 ಮತ್ತು 7ರಂದು ಉಳಿದ ಎರಡು ಹಂತಗಳ ಮತದಾನ ನಡೆಯಲಿದೆ.

ಮಾರ್ಚ್‌ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ಕಳೆದ (2017ರ) ವಿಧಾನ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಎಸ್‌ಪಿ 47, ಬಿಎಸ್‌ಪಿ 19 ಕ್ಷೇತ್ರಗಳಲ್ಲಿ ಜಯ ಕಂಡರೆ, ಕಾಂಗ್ರೆಸ್ ಕೇವಲ 7 ಕಡೆ ಖಾತೆ ತೆರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT