ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವೈರಸ್‌ ನಿರ್ಮೂಲನೆಗೆ ಮಮತಾ ಲಸಿಕೆ: ಅಭಿಷೇಕ್‌ ಬ್ಯಾನರ್ಜಿ

Last Updated 25 ಅಕ್ಟೋಬರ್ 2021, 16:34 IST
ಅಕ್ಷರ ಗಾತ್ರ

ದಿನ್ಹತ್: ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ‌ ಅವರು ಬಿಜೆಪಿಯನ್ನು ʼವೈರಸ್ʼ ಎಂದು ಕರೆದಿದ್ದು‌, ಅದನ್ನು (ಬಿಜೆಪಿಯನ್ನು) ದೇಶದಿಂದ ನಿರ್ಮೂಲನೆ ಮಾಡಲು ಇರುವ ಏಕೈಕ ʼಲಸಿಕೆʼ ಮಮತಾ ಬ್ಯಾನರ್ಜಿ ಎಂದು ಹೇಳಿದ್ದಾರೆ.

ಬಿಜೆಪಿಯನ್ನು ʼಹಿಂದೂಗಳ ವೈರಿʼ ಎಂದಿರುವ ಅವರು,ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ಚುನಾವಣಾ ಯೋಜನೆಗೆ ಬಳಸಿಕೊಂಡು ವಿಧಾನಸಭೆ ಚುನಾವಣೆ ವೇಳೆ ರಾಜಕೀಯ ಧ್ರುವೀಕರಣಕ್ಕೆ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.‌ಪಶ್ಚಿಮ ಬಂಗಾಳದ ನಾಲ್ಕು ಕ್ಷೇತ್ರಗಳಲ್ಲಿ ಉಪಚುನಾವಣೆ ನಿಗದಿಯಾಗಿದ್ದು, ಎರಡು ಕ್ಷೇತ್ರಗಳಲ್ಲಿನ ಚುನಾವಣೆಯನ್ನು ಬಿಜೆಪಿಯೇ ಜನರ ಮೇಲೆ ಹೇರಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.‌

ನಗರದಲ್ಲಿ ನಡೆದಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿರುವ ಬ್ಯಾನರ್ಜಿ, ʼಬಿಜೆಪಿಯ ವಿಜೇತ ಅಭ್ಯರ್ಥಿಗಳಾದ ಜಗನ್ನಾಥ್‌ ಸರ್ಕಾರ್‌ (ಶಾಂತಿಪುರ್)‌ ಮತ್ತು ನಿಸಿತ್‌ ಪ್ರಾಮಾಣಿಕ್‌ (ದಿನ್ಹಾತ), ಜನರಿಂದ ಚುನಾಯಿತರಾದ ಬಳಿಕಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಂಗಾಳದಲ್ಲಿ ಬಿಜೆಪಿ ಜಯ ಸಾಧಿಸುತ್ತದೆ. ನಂತರ ಸಚಿವರಾಗುತ್ತೇವೆಂದು ಅವರು ನಂಬಿದ್ದರು. ಆದರೆ, ಪಕ್ಷವು ವಿಫಲವಾಯಿತು. ಅವರು ಶಾಸಕರಾಗಿ ಮುಂದುವರಿಯಲು ಉತ್ಸುಕರಾಗಿಲ್ಲʼ ಎಂದು ಹೇಳಿದ್ದಾರೆ. ಸಂಸದರೂ ಆಗಿರುವ ನಿಸಿತ್‌ ಮತ್ತು ಸರ್ಕಾರ್‌ ಸಂಸತ್‌ ಸ್ಥಾನದಲ್ಲೇ ಮುಂದುವರಿಯಲು ನಿರ್ಧರಿಸಿದ್ದಾರೆ.

ಹೀಗಾಗಿ, ʼಅವರು ಲೋಕಸಭೆ ಸ್ಥಾನವನ್ನು ಉಳಿಸಿಕೊಳ್ಳಲು ಬಯಸುತ್ತಿದ್ದರೆ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬಾರದಿತ್ತು.ಸಂಸತ್‌ ಸ್ಥಾನಗಳನ್ನು ಉಳಿಸಿಕೊಳ್ಳುವ ಮೂಲಕ ಅವರು (ನಿಸಿತ್‌ ಮತ್ತು ಸರ್ಕಾರ್‌) ಜನರ ತೀರ್ಪಿಗೆ ಅಗೌರವ ತೋರಿದ್ದಾರೆʼ ಎಂದು ಕಿಡಿಕಾರಿದ್ದಾರೆ.

ಗೊಸಬಾ ಮತ್ತು ಖಾರ್ದಾಹ್‌ ಕ್ಷೇತ್ರಗಳು ಉಪಚುನಾವಣೆ ನಡೆಯಲಿರುವ ಇನ್ನೆರಡು ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳ ಶಾಸಕರು ಮೃತಪಟ್ಟಿರುವ ಹಿನ್ನಲೆಯಲ್ಲಿ ಉಪಚುನಾವಣೆ ನಿಗದಿಯಾಗಿದೆ.

ಅಕ್ಟೋಬರ್‌30ರಂದು ನಡೆಯುವಉಪಚುನಾವಣೆಯಲ್ಲಿತಮ್ಮ ಪಕ್ಷವು4-0 ಮುನ್ನಡೆ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅಭಿಷೇಕ್‌, ಉಪಚುನಾವಣೆ ಫಲಿತಾಂಶಕ್ಕಾಗಿ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ದೇಶದ ಜನರು ಮಮತಾ ಬ್ಯಾನರ್ಜಿಯವರಂಥ ನಾಯಕರನ್ನು ಬಯಸುತ್ತಿದ್ದಾರೆ. ಅದಕ್ಕಾಗಿಯೇ ಅವರು, ʼದೇಶದ ನಾಯಕಿ ಹೇಗಿರಬೇಕು, ಮಮತಾ ದೀದಿಯಂತಿರಬೇಕುʼಎಂಬಂತಹ ಘೋಷಣೆಗಳನ್ನು ಕೂಗುತ್ತಿದ್ದಾರೆ. ಕೋವಿಡ್-19‌ ವಿರುದ್ಧ ಹೋರಾಡುವ ಲಸಿಕೆಯಂತೆ, ಮಮತಾ ಬ್ಯಾನರ್ಜಿ ಅವರು ಬಿಜೆಪಿ ವೈರಸ್‌ ವಿರುದ್ಧದ ಲಸಿಕೆಯಾಗಿದ್ದಾರೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು, ʼಕೋವಿಡ್‌ ವಿರುದ್ಧ ಹೋರಾಡಲು ನಾವು ಎರಡು ಡೋಸ್‌ ಲಸಿಕೆ ಪಡೆಯುತ್ತಿರುವಂತೆ, ಬಿಜೆಪಿ ವೈರಸ್‌ ವಿರುದ್ಧ ಮೊದಲ ಡೋಸ್‌ ಅನ್ನು ಅಕ್ಟೋಬರ್‌30 ರಂದು ಉಪಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಮಾಡಬೇಕಿದೆ. ಬಿಜೆಪಿ ವೈರಸ್‌ ಅನ್ನು ನಿರ್ಮೂಲನೆ ಮಾಡಲುಮುಂದಿನ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎರಡನೇ ಡೋಸ್‌ ನೀಡಬೇಕಿದೆʼ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT