ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರಿಗೆ ತಮಿಳು ಕಡ್ಡಾಯ: ಕಾಯ್ದೆಗೆ ತಿದ್ದುಪಡಿ

Last Updated 13 ಜನವರಿ 2023, 15:49 IST
ಅಕ್ಷರ ಗಾತ್ರ

ಚೆನ್ನೈ: ರಾಜ್ಯದಲ್ಲಿ ಸರ್ಕಾರಿ ಸೇವೆಗೆ ನೇಮಕಗೊಳ್ಳಲು ತಮಿಳು ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದನ್ನು ಕಡ್ಡಾಯಗೊಳಿಸುವ ಸಲುವಾಗಿ ತಮಿಳುನಾಡು ವಿಧಾನಸಭೆಯಲ್ಲಿ ಶುಕ್ರವಾರ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ.

ರಾಜ್ಯದ ಅಧಿಕೃತ ಭಾಷೆಯಾದ ತಮಿಳಿನಲ್ಲಿ ಸಾಕಷ್ಟು ಜ್ಞಾನ ಹೊಂದಿರದಿದ್ದರೆ, ಯಾವುದೇ ವ್ಯಕ್ತಿ ನೇರ ನೇಮಕಾತಿಯ ಮೂಲಕ ಯಾವುದೇ ಸೇವೆಗೆ ನೇಮಕಗೊಳ್ಳಲು ಅರ್ಹನಾಗಿರುವುದಿಲ್ಲ ಎಂದು ತಮಿಳುನಾಡು ಸರ್ಕಾರಿ ನೌಕರರ (ಸೇವಾ ಷರತ್ತುಗಳು) ಕಾಯಿದೆ, 2016ಕ್ಕೆ ಮಾಡಿರುವ ತಿದ್ದುಪಡಿಯಲ್ಲಿ ಹೇಳಲಾಗಿದೆ.

ತಮಿಳು ಭಾಷೆಯಲ್ಲಿ ಸಾಕಷ್ಟು ಜ್ಞಾನ ಹೊಂದಿರದ ಅಭ್ಯರ್ಥಿಗಳು ನೇಮಕಗೊಂಡರೆ ಎರಡು ವರ್ಷಗಳ ಅವಧಿಯಲ್ಲಿ ಅವರು ತಮಿಳಿನಲ್ಲಿ ‘ಎರಡನೇ ದರ್ಜೆಯ ಭಾಷಾ ಪರೀಕ್ಷೆ’ಯನ್ನು ಉತ್ತೀರ್ಣರಾಗಬೇಕು ಇಲ್ಲದಿದ್ದರೆ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗುವುದು ಎಂದೂ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT