ಗುರುವಾರ , ಜೂನ್ 30, 2022
22 °C

ತಮಿಳುನಾಡು ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60ಕ್ಕೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ತಮಿಳುನಾಡು ಸರ್ಕಾರವು ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60ಕ್ಕೆ ಏರಿಸಿದೆ. ಈ ಬಗ್ಗೆ ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಗುರುವಾರ ತಿಳಿಸಿದ್ದಾರೆ.

‘110 ನೇ ನಿಯಮದಡಿಯಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಒಂದು ವರ್ಷ ಹೆಚ್ಚಿಸಲಾಗಿದೆ. ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಪಿಎಸ್‌ಯು, ಸ್ಥಳೀಯ ಸಂಸ್ಥೆ ನೌಕರರು ಈ ನಿಯಮಕ್ಕೆ ಒಳಪಡುತ್ತಾರೆ. ಅಲ್ಲದೆ ಮೇ 31,2021ರಲ್ಲಿ ನಿವೃತ್ತಿ ಪಡೆಯುವವರಿಗೂ ಈ ನಿಯಮ ಅನ್ವಯಿಸುತ್ತದೆ’ ಎಂದು ಪಳನಿಸ್ವಾಮಿ ಅವರು ತಿಳಿಸಿದ್ದಾರೆ.

ತಮಿಳುನಾಡಿನ ಸರ್ಕಾರಿ ನೌಕರರ ಹಾಲಿ ನಿವೃತ್ತಿ ವಯಸ್ಸು 59. ಕಳೆದ ವರ್ಷವೂ ನಿವೃತ್ತಿ ವಯಸ್ಸನ್ನು ಒಂದು ವರ್ಷಕ್ಕೆ ಏರಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು