ಮಂಗಳವಾರ, ಆಗಸ್ಟ್ 16, 2022
30 °C

ವರ್ಚುವಲ್ ವಿಚಾರಣೆಗೆ ಒತ್ತುವಿಡಿಯೊ ಕ್ಯಾಬಿನ್ ನಿರ್ಮಿಸಲು ಕ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ವರ್ಚುವಲ್ ಸ್ವರೂಪದ ಕೋರ್ಟ್ ವಿಚಾರಣೆಗೆ ಉತ್ತೇಜನ ನೀಡಲು ದೇಶದಾದ್ಯಂತ 2,506  ನ್ಯಾಯಾಲಯ ಸಂಕೀರ್ಣಗಳಲ್ಲಿ ವಿಡಿಯೊ ಕ್ಯಾಬಿನ್ ಸೌಲಭ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡಲಾಗಿದೆ.

ಕಾನೂನು ಸಚಿವಾಲಯದ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಒಟ್ಟು ₹ 5.21 ಕೋಟಿ ಅನ್ನು ಸೆಪ್ಟೆಂಬರ್ ತಿಂಗಳಲ್ಲಿ ಹಾಗೂ ವಿಡಿಯೊ ಕಾನ್ಫರೆನ್ಸ್ ಪರಿಕರಗಳು ಅಂದರೆ ಕೇಬಲ್, ಮಾನಿಟರ್, ಹಾರ್ಡ್‌ವೇರ್ ಸೌಲಭ್ಯ ಖರೀದಿಗೆ ₹ 28 ಕೋಟಿ ಅನ್ನು ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್‌ನ ಇ–ಕಮಿಟಿಯು ಆರ್ಥಿಕ ಸಂಪನ್ಮೂಲವನ್ನು ಕಾನೂನು ಸಚಿವಾಲಯದ ವ್ಯಾಪ್ತಿಗೆ ಒಳಪಡುವ ನ್ಯಾಯಾಂಗ ಇಲಾಖೆಗೆ ಬಿಡುಗಡೆ ಮಾಡಿದೆ. ದೇಶದಾದ್ಯಂತ ಒಟ್ಟು 3,288 ಕೋರ್ಟ್‌ ಸಂಕೀರ್ಣಗಳಿವೆ. ಇವುಗಳ ಪೈಕಿ 2,506ರಲ್ಲಿ ಕ್ಯಾಬಿನ್ ನಿರ್ಮಾಣ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.

ಹೆಚ್ಚಿನ ಸಂಖ್ಯೆಯ ನ್ಯಾಯಾಂಗ ಕೊಠಡಿಗಳಿರುವ ಕೋರ್ಟ್ ಸಂಕೀರ್ಣಗಳಲ್ಲಿ ಹೆಚ್ಚಿನ ಸಂಖ್ಯೆಯ ಕ್ಯಾಬಿನ್‌ಗಳು ದೊರೆಯಲಿವೆ. ಆಯಾ ರಾಜ್ಯದ ಜನಸಂಖ್ಯೆಯನ್ನು ಆಧರಿಸಿ ಈ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕೋವಿಡ್‌ –19 ಪರಿಸ್ಥಿತಿಯ ನಡುವೆಯು ಸರ್ಕಾರ ಹೆಚ್ಚುವರಿಯಾಗಿ 1,500 ವಿಡಿಯೊ ಕಾನ್ಫರೆನ್ಸ್ ಲೈಸೆನ್ಸ್ ಅನ್ನು ಅಂದಾಜು ₹ 9 ಕೋಟಿ ವೆಚ್ಚದಲ್ಲಿ ಪಡೆದುಕೊಂಡಿದೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು