ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನಕ್ಕೆ ‘ದ್ವಿ ಶಾಂತಿ’ ಅಗತ್ಯವಿದೆ: ಜೈಶಂಕರ್‌

Last Updated 30 ಮಾರ್ಚ್ 2021, 11:01 IST
ಅಕ್ಷರ ಗಾತ್ರ

ದುಶಾನ್ಬೆ: ಅಫ್ಗಾನಿಸ್ತಾನದಲ್ಲಿನ ಹಿಂಸಾಚಾರ ಮತ್ತು ರಕ್ತಪಾತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತ, ಯುದ್ಧ ಪೀಡಿತ ದೇಶದೊಳಗೆ ಮತ್ತು ಸುತ್ತಲೂ ಶಾಂತಿಯ (ದ್ವಿ ಶಾಂತಿ) ಅಗತ್ಯವಿದೆ ಎಂದು ಪ್ರತಿಪಾದಿಸಿದೆ.

ಈ ಕುರಿತು ರಾಜಕೀಯ ಪರಿಹಾರಕ್ಕೆ ಸಂಬಂಧಿಸಿದವರು ಒಳ್ಳೆಯ ನಂಬಿಕೆ ಮತ್ತು ಬದ್ಧತೆಯಿಂದ ಮುಂದಾಗಬೇಕು ಎಂದು ಕರೆಕೊಟ್ಟಿದೆ.

ತಜಕಿಸ್ತಾನದ ರಾಜಧಾನಿ ದುಶಾನ್ಬೆಯಲ್ಲಿ ನಡೆದ 9ನೇ ‘ಹಾರ್ಟ್ ಆಫ್ ಏಷ್ಯಾ’ ಸಚಿವರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಅಫ್ಗಾನಿಸ್ತಾನದಲ್ಲಿನ ಸರ್ಕಾರ ಮತ್ತು ತಾಲಿಬಾನ್ ನಡುವಿನ ಮಾತುಕತೆಯನ್ನು ಚುರುಕುಗೊಳಿಸಲು ಕೈಗೊಂಡಿರುವ ಎಲ್ಲ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ ಎಂದರು.

ಅಫ್ಗಾನಿಸ್ತಾನಕ್ಕೆ ನಿಜವಾದ 'ದ್ವಿ ಶಾಂತಿ' ಬೇಕಾಗಿದೆ. ಅಂದರೆ, ಅದು ಅಫ್ಘಾನಿಸ್ತಾನದೊಳಗಿನ ಶಾಂತಿ ಮತ್ತು ದೇಶದ ಸುತ್ತಲಿನ ಶಾಂತಿಯಾಗಿದೆ. ಅದಕ್ಕಾಗಿ ಆ ದೇಶದ ಒಳಗೆ ಮತ್ತು ಸುತ್ತಮುತ್ತಲಿನ ಎಲ್ಲರ ಹಿತಾಸಕ್ತಿಗಳನ್ನು ಸಮನ್ವಯಗೊಳಿಸುವ ಅಗತ್ಯವಿದೆ ಎಂದು ಜೈಶಂಕರ್ ಸಮ್ಮೇಳನದಲ್ಲಿ ಹೇಳಿದರು. ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ, ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಮತ್ತು ಇತರರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

ಸ್ಥಿರ, ಸಾರ್ವಭೌಮ ಮತ್ತು ಶಾಂತಿಯುತ ಅಫ್ಗಾನಿಸ್ತಾನದಲ್ಲಿವು ಏಷ್ಯಾದಲ್ಲಿ ಶಾಂತಿ ಮತ್ತು ಪ್ರಗತಿಗೆ ಆಧಾರವಾಗುತ್ತದೆ ಎಂದ ಅವರು, ಇದು ಭಯೋತ್ಪಾದನೆ, ಉಗ್ರವಾದ, ಮಾದಕವಸ್ತು ಮತ್ತು ಅಪರಾಧ ಚಟುವಟಿಕೆ ನಡೆಸುವವರಿಂದ ಮುಕ್ತವಾಗಿದೆಯೇ ಎಂಬುದನ್ನು ಸಾಮೂಹಿಕವಾಗಿ ಖಚಿತಪಡಿಸಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.

ಇಂದು, ದಶಕಗಳ ಸಂಘರ್ಷವನ್ನು ನಿವಾರಿಸಬಲ್ಲ ಅಫ್ಗಾನಿಸ್ತಾನಕ್ಕಾಗಿ ನಾವು ಪ್ರಯತ್ನಿಸುತ್ತಿದ್ದೇವೆ. ದೀರ್ಘಕಾಲ ಸಾಕಾರಗೊಳಿಸುವ ತತ್ವಗಳಿಗೆ ಬದ್ಧವಾಗಿದ್ದರೆ ಮಾತ್ರ ಅದು ಸಾಧ್ಯ. ಸಾಮೂಹಿಕ ಯಶಸ್ಸು ಸುಲಭವಲ್ಲ, ಆದರೆ ಪರ್ಯಾಯವು ಕೇವಲ ಸಾಮೂಹಿಕ ವೈಫಲ್ಯವನ್ನು ತರುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT