ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.10ರಂದು ರಾಜನಾಥ ಸಿಂಗ್‌ ನೇತೃತ್ವದಲ್ಲಿ ರಫೇಲ್‌ ವಿಮಾನ ಸೇನೆಗೆ ನಿಯೋಜನೆ

Last Updated 28 ಆಗಸ್ಟ್ 2020, 18:57 IST
ಅಕ್ಷರ ಗಾತ್ರ

ನವದೆಹಲಿ:ಸೆ.10ರಂದು ರಕ್ಷಣಾ ಸಚಿವ ರಾಜನಾಥ‌ ಸಿಂಗ್‌ ಅವರು ಐದು ರಫೇಲ್‌ ಯುದ್ಧ ವಿಮಾನಗಳನ್ನು ಸೇನೆಗೆ ನಿಯೋಜನೆ ಮಾಡಲಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಫ್ರಾನ್ಸ್ ರಕ್ಷಣಾ ಸಚಿವರನ್ನು ಆಹ್ವಾನಿಸಲಾಗಿದೆ.

ರಾಜನಾಥ‌ ಸಿಂಗ್ ಅವರು ಸೆ.4 ರಿಂದ 6 ರವರೆಗೆ ರಷ್ಯಾದಲ್ಲಿ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ವಾಪಸ್‌ ಆದ ಬಳಿಕ ಈ ಕಾರ್ಯಕ್ರಮದಲ್ಲಿ ಪಾಲ್ಗೊಳಲಿದ್ದಾರೆ.

ಯುದ್ಧವಿಮಾನ ಖರೀದಿಗೆ ಫ್ರಾನ್ಸ್–ಭಾರತದ ನಡುವೆ ಒಪ್ಪಂದ ಏರ್ಪಟ್ಟ ನಾಲ್ಕು ವರ್ಷಗಳ ಬಳಿಕ ಮೊದಲ ಹಂತವಾಗಿ ಐದು ಯುದ್ಧ ವಿಮಾನಗಳು ಭಾರತಕ್ಕೆ ಬಂದಿವೆ. ಇನ್ನೂ ಐದು ವಿಮಾನಗಳನ್ನು ಫ್ರಾನ್ಸ್‌ನಲ್ಲಿ ತರಬೇತಿಗೆ ಬಳಸಿಕೊಳ್ಳಲಾಗುತ್ತಿದೆ.

ಚೀನಾ ಗಡಿಯ ಲಡಾಖ್ ವಲಯದ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ರಫೇಲ್ ವಿಮಾನವನ್ನು ನಿಯೋಜಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಒಟ್ಟು 36 ರಫೇಲ್‌ ವಿಮಾನಗಳ ಪೈಕಿ 30 ವಿಮಾನಗಳು ಯುದ್ಧ ಸನ್ನದ್ಧ ಸ್ಥಿತಿಯಲ್ಲಿರಲಿವೆ ಹಾಗೂ ಉಳಿದ 6 ವಿಮಾನಗಳು ತರಬೇತಿ ನೀಡಲಿವೆ.

2016ರಲ್ಲಿ ಒಪ್ಪಂದ:ಎನ್‌ಡಿಎ ಸರ್ಕಾರವು ಫ್ರಾನ್ಸ್‌ನ ವಾಯುಯಾನ ಸಂಸ್ಥೆ ಡಾಸೊ ಏವಿಯೇಷನ್‌ನಿಂದ 36 ರಫೇಲ್ ಯುದ್ಧವಿಮಾನಗಳನ್ನು ₹59,000 ಕೋಟಿಗೆ ಖರೀದಿಸುವ ಒಪ್ಪಂದಕ್ಕೆ 2016ರ‌ ಸೆಪ್ಟೆಂಬರ್ 23ರಂದು ಸಹಿ ಹಾಕಿತ್ತು.

‘10 ರಫೇಲ್ ಜೆಟ್‌ಗಳನ್ನು ಭಾರತಕ್ಕೆ ಕಳಿಸುವ ಕಾರ್ಯ ಪೂರ್ಣಗೊಂಡಿದೆ. ಆದರೆ, ಐದು ವಿಮಾನಗಳು ಬಂದಿದ್ದು, ಉಳಿದ ಐದು ವಿಮಾನಗಳನ್ನು ತರಬೇತಿ ಉದ್ದೇಶಕ್ಕಾಗಿ ಫ್ರಾನ್ಸ್‌ನಲ್ಲಿಯೇ ಬಿಡಲಾಗಿದೆ’ ಎಂದು ಕೇಂದ್ರಸರ್ಕಾರ ಹೇಳಿತ್ತು.

‘2021ರ‌ ಅಂತ್ಯದ ವೇಳೆಗೆ, ಎಲ್ಲ‌ 36 ಯುದ್ಧವಿಮಾನಗಳು ವಾಯುಪಡೆಯನ್ನು ಸೇರಲಿವೆ’ ಎಂದೂ ಸರ್ಕಾರಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT