ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿಗಳಿಗೆ ಕೋವಿಡ್ 19 ಲಸಿಕೆ ‘ಅನೊಕೊವ್ಯಾಕ್ಸ್’ ಬಿಡುಗಡೆ

COVID-19 vaccine Anocovax for animals
Last Updated 9 ಜೂನ್ 2022, 19:31 IST
ಅಕ್ಷರ ಗಾತ್ರ

ನವದೆಹಲಿ: ಪ್ರಾಣಿಗಳಿಗೆ ನೀಡಬಹುದಾದ, ದೇಶಿಯವಾಗಿಯೇ ಅಭಿವೃದ್ಧಿಪಡಿಸಿರುವ ಕೋವಿಡ್ 19 ಲಸಿಕೆ ‘ಅನೊಕೊವ್ಯಾಕ್ಸ್’ ಅನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಗುರುವಾರ ಬಿಡುಗಡೆ ಮಾಡಿದರು.

ಹರಿಯಾಣ ಮೂಲದ ಐಸಿಎಆರ್-ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಇಕ್ವೈನ್ಸ್ (ಎನ್‌ಆರ್‌ಸಿ)ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಈ ಲಸಿಕೆನಾಯಿ, ಸಿಂಹ, ಚಿರತೆ, ಇಲಿ ಮತ್ತು ಮೊಲಗಳಿಗೆ ಸುರಕ್ಷಿತವಾಗಿದೆ ಎಂದು ಐಸಿಎಆರ್‌ ಹೇಳಿಕೆಯಲ್ಲಿ ತಿಳಿಸಿದೆ.

‘ವಿಜ್ಞಾನಿಗಳ ಅವಿರತ ಕೊಡುಗೆಗಳಿಂದ ರಾಷ್ಟ್ರವು ತನ್ನದೇ ಆದ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ್ವಾವಲಂಬಿಯಾಗಿದೆ. ಇದು ನಿಜವಾಗಿಯೂ ದೊಡ್ಡ ಸಾಧನೆ’ ಎಂದು ತೋಮರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT