ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ ಭದ್ರತೆಗಾಗಿ ದ್ವಿಪಕ್ಷೀಯ ಸಹಕಾರ: ಅಮೆರಿಕ ನೌಕಾ ಕಮಾಂಡರ್‌

Last Updated 12 ಅಕ್ಟೋಬರ್ 2021, 9:32 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಮೈಖೇಲ್ ಗಿಲ್ಡ್‌ ಮಂಗಳವಾರ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರನ್ನು ಭೇಟಿಯಾಗಿ ಕಡಲ ರಕ್ಷಣೆ ಕುರಿತು ದ್ವಿಪಕ್ಷೀಯ ಸಹಕಾರ ಸೇರಿದಂತೆ ಹಲವು ವಿಷಯಗಳ ಕುರಿತು ಕುರಿತು ವ್ಯಾಪಕವಾಗಿ ಚರ್ಚೆ ನಡೆಸಿದರು.

ಇಂಡೊ-ಪೆಸಿಫಿಕ್‌ ಸೇರಿದಂತೆ ಪ್ರಮುಖ ಜಲಮಾರ್ಗಗಳಲ್ಲಿ ಚೀನಾ ತನ್ನ ಸಾಮರ್ಥ್ಯವನ್ನು ವೃದ್ಧಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ನೌಕಾಪಡೆಯ ಮುಖ್ಯಸ್ಥರು ಚರ್ಚೆ ನಡೆಸಿದ್ದಾರೆ.‌ ಅಡ್ಮಿರಲ್‌ ಮೈಖೇಲ್‌ ಗಿಲ್ಡ್‌ ಅವರು ಅ.11 ರಿಂದ 15 ರವರೆಗೆ ಐದು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದರೆ.

’ಪ್ರಾದೇಶಿಕ ಭದ್ರತೆಯ ಸ್ಥಿತಿ–ಗತಿ, ಇಂಡೊ-ಪೆಸಿಫಿಕ್‌ನ ಪರಿಸ್ಥಿತಿ ಮತ್ತು ಕಡಲ ಭದ್ರತೆಗಾಗಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಮಾರ್ಗಗಳು ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಚ ಅರ್ಪಿಸಿದ ನಂತರ ಮಾತನಾಡಿದ ಗಿಲ್ಡ್‌ ಅವರು ’ಭಾರತವು ಜಾಗತಿಕ ಮಟ್ಟದಲ್ಲಿ ಭದ್ರತೆಗೆ ಒತ್ತು ನೀಡುತ್ತದೆ. ಈ ವಿಷಯದಲ್ಲಿ ದೀರ್ಘ ಮತ್ತು ವಿಶಿಷ್ಟವಾದ ದಾಖಲೆಯನ್ನು ಹೊಂದಿದೆ’ ಎಂದು ಹೇಳಿದರು.

’ಭಾರತದ ಭೇಟಿಯ ವೇಳೆ ನನಗೆ ಆತಿಥ್ಯ ನೀಡಿದ ಅಡ್ಮಿರಲ್ ಸಿಂಗ್ ಅವರಿಗೆ ಧನ್ಯವಾದಗಳು. ನಾವು(ಅಮೆರಿಕ) ಮಾಹಿತಿ ಹಂಚಿಕೆ, ಪ್ರಾದೇಶಿಕ ಭದ್ರತೆ ಮತ್ತು ಕಡಲಿನಲ್ಲಿ ಒಟ್ಟಿಗೆ ಸಮರಾಭ್ಯಾಸದ ಮೂಲಕ ರಕ್ಷಣಾ ಕ್ಷೇತ್ರದಲ್ಲಿನ ಪಾಲುದಾರಿಕೆಯನ್ನು ಕಾರ್ಯಗತಗೊಳಿಸಲು ಬದ್ಧರಾಗಿದ್ದೇವೆ’ ಎಂದು ಮೈಖೇಲ್‌ ಗಿಲ್ಡ್‌ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT