ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಡ್ ಡೆಲಿವರಿ ಬಾಯ್ ಬಳಿ ಲಂಚ ಕೇಳಿ ಕಂಬಿ ಹಿಂದೆ ಹೋದ ಪೊಲೀಸ್ ಇನ್ಸ್‌ಪೆಕ್ಟರ್!

Last Updated 30 ಜೂನ್ 2021, 6:55 IST
ಅಕ್ಷರ ಗಾತ್ರ

ಮುಂಬೈ; ಫುಡ್ ಡೆಲಿವರಿ ಬಾಯ್ ಒಬ್ಬನ ಬಳಿ ₹2000 ಲಂಚ ಸ್ವೀಕರಿಸುತ್ತಿದ್ದ ಸಂಚಾರ ಪೊಲೀಸ್ ಇನ್ಸಪೆಕ್ಟರನ್ನು ಮುಂಬೈ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಡೆಲಿವರಿ ಬಾಯ್ ಬೈಕ್‌ಅನ್ನು ಇನ್ಸ್‌ಪೆಕ್ಟರ್ ಭಾನುವಾರ ವಶಪಡಿಸಿಕೊಂಡು ಖಾಂಡಿವಲಿ ದಾಹಿಸರ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದರು‌.

ಅದಾಗಲೇ ಡೆಲಿವರಿ ಬಾಯ್ ಬೈಕ್ ಮೇಲೆ ₹8000 ದಂಡ ಬಾಕಿ ಇತ್ತು. ಈ ಪ್ರಕರಣವನ್ನು ಮುಗಿಸಬೇಕಾದರೆ ₹2000 ಲಂಚ ನೀಡಲು ಇನ್ಸ್‌ಪೆಕ್ಟರ್ ಬೇಡಿಕೆ ಇಟ್ಟಿದ್ದರು.

ಮಂಗಳವಾರ ಡೆಲಿವರಿ ಬಾಯ್ ಬಳಿ ಲಂಚ ಸ್ವೀಕರಿಸುವಾಗ ಎಸಿಬಿ ಪೊಲೀಸ್ ದಾಳಿ ಮಾಡಿ ಇನ್ಸ್‌ಪೆಕ್ಟರ್ ಅವರನ್ನು ಬಂಧಿಸಿದೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT