ಬುಧವಾರ, ಆಗಸ್ಟ್ 10, 2022
23 °C

ಚಾನೆಲ್‌ ಆಯ್ಕೆಗೆ ವೆಬ್ ಪೋರ್ಟಲ್‌ ಆರಂಭಿಸಿದ ಟ್ರಾಯ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಗ್ರಾಹಕರ ಅನುಕೂಲಕ್ಕಾಗಿ ಟಿವಿ ಚಾನೆಲ್‌ ಆಯ್ಕೆಯ ವೆಬ್‌ ಪೋರ್ಟಲ್‌ ಅನ್ನು ಪ್ರಾರಂಭಿಸಿದೆ.

ಟ್ರಾಯ್‌ ಕಳೆದ ವರ್ಷ ಜೂನ್‌ 25 ರಂದು ಟಿವಿ ಚಾನೆಲ್‌ ಆಯ್ಕೆಯ ಮೊಬೈಲ್‌ ಆ್ಯಪ್‌ ಅನ್ನು ಪ್ರಾರಂಭಿಸಿತ್ತು. ಚಂದಾದಾರಿಕೆಯನ್ನು ಪರಿಶೀಲಿಸಲು, ಅದನ್ನು ಮಾರ್ಪಡಿಸಲು, ಕೇಬಲ್‌ ನಿರ್ವಾಹಕರು ಯಾವೆಲ್ಲ ಚಾನೆಲ್‌ಗಳನ್ನು ಒದಗಿಸುತ್ತಿದ್ದಾರೆ ಎಂಬುದನ್ನು ನೋಡಲು, ತಮ್ಮ ನೆಚ್ಚಿನ ಚಾನೆಲ್‌ಗಳನ್ನು ಆಯ್ಕೆ ಮಾಡಲು ಬಳಕೆದಾರರಿಗೆ ಈ ಆ್ಯಪ್‌ ಸೌಲಭ್ಯ ಒದಗಿಸಿತ್ತು.  

ಆದರೆ ಸ್ಮಾರ್ಟ್‌ಫೋನ್‌ ಹೊಂದಿರುವವರು ಮಾತ್ರ ಈ ಸೌಲಭ್ಯ ಪಡೆಯಲು ಅವಕಾಶ ಇತ್ತು. ಸ್ಮಾರ್ಟ್‌ಫೋನ್‌ ಹೊಂದಿರದ ಗ್ರಾಹಕರಿಗೆ ಅನುಕೂಲವಾಗುವಂತೆ ಟ್ರಾಯ್‌ ಈ ವೆಬ್‌ ಪೋರ್ಟಲ್‌ ಆರಂಭಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.