ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈನಲ್ಲಿ ಭೂಮಿ ಕಂಪಿಸಿದ ಅನುಭವ: ಭೂಕಂಪದ ದತ್ತಾಂಶ ಲಭ್ಯವಿಲ್ಲ– ಅಧಿಕಾರಿಗಳು

Last Updated 22 ಫೆಬ್ರುವರಿ 2023, 10:54 IST
ಅಕ್ಷರ ಗಾತ್ರ

ಚೆನ್ನೈ: ಇಲ್ಲಿನ ಅಣ್ಣಾ ಸಲೈ ಹಾಗೂ ವೈಟ್‌ ರೋಡ್‌ ಪ್ರದೇಶಗಳ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಭೂಮಿ ಕಂಪಿಸಿದ್ದರಿಂದ ಅಣ್ಣಾ ಸಲೈ ಪ್ರದೇಶದಲ್ಲಿರುವ ಕಚೇರಿಗಳು ಹಾಗೂ ಮನೆಗಳಿಂದ ಜನರು ಭಯದಿಂದ ಹೊರಗೆ ಬಂದಿದ್ದಾರೆ.

ಈ ಬಗ್ಗೆ ರಾಷ್ಟ್ರೀಯ ಭೂಕಂಪ ಕೇಂದ್ರಕ್ಕೆ(ಎನ್‌ಸಿಎಸ್) ಮಾಹಿತಿ ನೀಡಲಾಗಿದೆ. ಆದರೆ ಭೂಕಂಪನದ ಬಗ್ಗೆ ಯಾವುದೇ ದತ್ತಾಂಶಗಳು ಲಭ್ಯವಾಗಿಲ್ಲ ಎಂದು ದಕ್ಷಿಣ ವಲಯದ ಹವಾಮಾನ ಕೇಂದ್ರದ ಮುಖ್ಯಸ್ಥ ಬಾಲಚಂದ್ರನ್‌ ತಿಳಿಸಿದ್ದಾರೆ.

ಅಣ್ಣಾ ಸಲೈ ಹಾಗೂ ವೈಟ್‌ ರೋಡ್‌ ಪ್ರದೇಶಗಳ ವ್ಯಾಪ್ತಿಯಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿರುವುದರಿಂದ ಭೂಮಿ ಕಂಪಿಸಿರಬಹುದು ಎಂದು ಮೆಟ್ರೊ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ರಾಷ್ಟ್ರೀಯ ಭೂಕಂಪ ಕೇಂದ್ರದಲ್ಲಿ ಭೂಕಂಪವನವಾಗಿರುವ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ ಎಂದು ಸರ್ಕಾರಧ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT