ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ. 16ರವರೆಗೆ ಅರ್ನಬ್‌ ವಿರುದ್ಧ ಕ್ರಮ ಇಲ್ಲ: ಮುಂಬೈ ಪೊಲೀಸ್‌

Last Updated 5 ಮಾರ್ಚ್ 2021, 15:59 IST
ಅಕ್ಷರ ಗಾತ್ರ

ಮುಂಬೈ: ಟೆಲಿವಿಷನ್‌ ರೇಟಿಂಗ್ ಪಾಯಿಂಟ್‌ (ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಅರ್ನಬ್ ಗೋಸ್ವಾಮಿ ಮತ್ತು ಎಆರ್‌ಜಿ ಔಟ್‌ಲಿಯರ್ ಮೀಡಿಯಾ ಸಂಸ್ಥೆಯ ಇತರ ಉದ್ಯೋಗಿಗಳ ವಿರುದ್ಧ ಮಾರ್ಚ್‌ 16ರವರೆಗೆ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂದು ಮುಂಬೈನ ಪೊಲೀಸರು ಬಾಂಬೆ ಹೈಕೋರ್ಟ್‌ಗೆ ಭರವಸೆ ನೀಡಿದ್ದಾರೆ.

ಮುಂಬೈ ಪೊಲೀಸ್ ಪರವಾಗಿ ಹಾಜರಿದ್ದ ವಕೀಲ ಕಪಿಲ್‌ ಸಿಬಲ್ ಅವರು, ನ್ಯಾಯಮೂರ್ತಿ ಎಸ್.ಎಸ್‌.ಶಿಂಧೆ ಮತ್ತು ಮನಿಶ್‌ ಪಿಠಾಲೆ ಅವರಿದ್ದ ಪೀಠಕ್ಕೆ ಈ ಭರವಸೆ ನೀಡಿದರು.

‌ಟಿಆರ್‌ಪಿ ಹಗರಣ ಸಂಬಂಧ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರಶ್ನಿಸಿ ‘ದ ರಿಪಬ್ಲಿಕ್‌’ ವಾಹಿನಿ ಮಾಲೀಕತ್ವದ ಎಆರ್‌ಜಿ ಔಟ್‌ಲಿಯರ್ ಮೀಡಿಯಾ ಅರ್ಜಿ ಸಲ್ಲಿಸಿದೆ. ಕಪಿಲ್‌ ಸಿಬಲ್ ಅವರ ಹೇಳಿಕೆ ಒಪ್ಪಿದ ಕೋರ್ಟ್‌, ಅಂತಿಮ ವಿಚಾರಣೆಯನ್ನು ಮಾರ್ಚ್‌ 16ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT