ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಆರ್‌ಪಿ ಹಗರಣ: ಮಾರ್ಚ್ 5ರವರೆಗೆ ಬಲವಂತದ ಕ್ರಮ ಇಲ್ಲ

Last Updated 12 ಫೆಬ್ರುವರಿ 2021, 11:56 IST
ಅಕ್ಷರ ಗಾತ್ರ

ಮುಂಬೈ: ನಕಲಿ ಟೆಲಿವಿಷನ್‌ ರೇಟಿಂಗ್ ಪಾಯಿಂಟ್‌ (ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌, ಪತ್ರಕರ್ತ ಅರ್ನಾಬ್ ಗೋಸ್ವಾಮಿ ಮತ್ತು ಎಆರ್‌ಜಿ ಔಟ್‌ಲಿಯರ್ ಮೀಡಿಯಾದ ಇತರ ಉದ್ಯೋಗಿಗಳಿಗೆ ನೀಡಿದ್ದ ‘ಮಧ್ಯಂತರ ರಕ್ಷಣೆ‘ಯನ್ನು ಮಾರ್ಚ್ 5ರವರೆಗೆ ವಿಸ್ತರಿಸಿದೆ.‌

ಟಿಆರ್‌ಪಿ ಹಗರಣ ಪ್ರಕರಣದಲ್ಲಿ ಮುಂಬೈ ಪೊಲೀಸರ ತನಿಖೆಯನ್ನು ಪ್ರಶ್ನಿಸಿ ಎಆರ್‌ಜಿ ಔಟ್‌ಲಿಯರ್ ಮೀಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ ಮುಂದೂಡಿದ ಕಾರಣ, ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮಕೈಗೊಳ್ಳದಂತೆ ಸೂಚಿಸಿದೆ.

ಮಹಾರಾಷ್ಟ್ರ ಸರ್ಕಾರದ ಪರ ಹಾಜರಾಗಿದ್ದ ವಕೀಲ ಕಪಿಲ್ ಸಿಬಲ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸುವ ವೇಳೆ ‘ಕಳೆದ ವಾರ ಎಆರ್‌ಜಿ ಔಟ್‌ಲಿಯರ್ ಮೀಡಿಯಾ ಪೊಲೀಸರ ಚಾರ್ಜ್‌ಶೀಟ್ ವಿರುದ್ಧ ಸಲ್ಲಿದ್ದ ಅಫಿಡವಿಟ್‌ನಲ್ಲಿ, ನಮಗೆ ಸಂಬಂಧಿಸಿದ ಕೆಲವು ಹೊಸ ಅಂಶಗಳು ಎಫ್‌ಐಆರ್‌ನಲ್ಲಿವೆ ಎಂದು ನಮೂದಿಸಿದ್ದರು‘ ಎಂದು ಉಲ್ಲೇಖಿಸಿದರು.

ಈ ಹೊಸ ದಾಖಲೆಗಳ ಬಗ್ಗೆ ಪ್ರತಿಕ್ರಿಯಿಸಲು ಸಮಯ ಬೇಕಾಗಿರುವುದರಿಂದ, ಎಆರ್‌ಜಿ ಪರ ವಕೀಲ ಹರೀಶ್ ಸಾಳ್ವೆ ಅವರು, ಈಗಿರುವ ದಾಖಲೆಗಳನ್ನು ಪರಿಗಣಿಸಬಾರದು ಎಂದು ಹೇಳಿದರು. ಆದರೆ, ಸಾಳ್ವೆ ಅವರು ಇದೇ ದಾಖಲೆಗಳನ್ನೇ ಪರಿಗಣಿಸಬೇಕೆಂದು ಒತ್ತಾಯಿಸಿದರು.

ಈ ವಾದ–ಪ್ರತಿವಾದ ಆಲಿಸಿದ ನ್ಯಾಯಾಲಯ, ಸಿಬಾಲ್ ಅವರ ಹೇಳಿಕೆಯನ್ನು ಸ್ವೀಕರಿಸಿ, ಮುಂದಿನ ವಿಚಾರವಣೆವರೆಗೂ ಆರೋಪಿಗಳಿಗೆ ಮಧ್ಯಂತರ ರಕ್ಷಣೆಯನ್ನು ಮುಂದುವರಿಸುವಂತೆ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT