ಬುಧವಾರ, ಆಗಸ್ಟ್ 17, 2022
29 °C

ಟಿಆರ್‌ಎಸ್‌ ಶಾಸಕ ನೋಮುಲಾ ನರಸಿಂಹಯ್ಯ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ತೆಲಂಗಾಣದ ಟಿಆರ್‌ಎಸ್‌ ಶಾಸಕ ನೋಮುಲಾ ನರಸಿಂಹಯ್ಯ ಅವರು(64) ವಯೋ ಸಂಬಂಧಿ ಕಾಯಿಲೆಯಿಂದಾಗಿ ಮಂಗಳವಾರ ನಿಧನರಾದರು.

ನಲ್ಗೊಂಡ ಜಿಲ್ಲೆಯ ನಾಗಾರ್ಜುನ ಸಾಗರ್ ಕ್ಷೇತ್ರದ ಶಾಸಕ ನರಸಿಂಹಯ್ಯ ಅವರು ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು. ಮಂಗಳವಾರ ಬೆಳಿಗ್ಗೆ 5.30ಕ್ಕೆ ಅವರು ಕೊನೆ ಉಸಿರೆಳೆದರು ಎಂದು ಮೂಲಗಳು ಹೇಳಿವೆ.

ನರಸಿಂಹಯ್ಯ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2014ರಲ್ಲಿ ಟಿಆರ್‌ಎಸ್‌ಗೆ ಸೇರುವ ಮುನ್ನ ಅವರು ಸಿಪಿಐ(ಎಂ) ಪಕ್ಷದಲ್ಲಿದ್ದರು.

ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು,‘ ನರಸಿಂಹಯ್ಯ ತಮ್ಮ ಜೀವನ ಪೂರ್ತಿ ಜನರ ಸೇವೆಗಾಗಿ ದುಡಿದರು. ಅವರ ಸೇವೆಯನ್ನು ಸದಾ ಸ್ಮರಿಸಲಾಗುವುದು’ ಎಂದು ಟ್ವೀಟ್‌ ಮಾಡಿದ್ದಾರೆ.

ನರಸಿಂಹಯ್ಯ ಅವರ ಸಾವು ಟಿಆರ್‌ಸಿ ಮತ್ತು ಅವರ ಕ್ಷೇತ್ರದ ಜನರಿಗೆ ತುಂಬಲಾಗದ ನಷ್ಟ ಎಂದು ಕೆ.ಚಂದ್ರಶೇಖರ್‌ ರಾವ್‌ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್‌ ಸಂಸದ ಎನ್‌. ಉತ್ತಮ್‌ ಕುಮಾರ್‌ ರೆಡ್ಡಿ, ಸಿಪಿಐ ನಾಯಕ ನಾರಾಯಣ್‌ ಸೇರಿದಂತೆ ಟಿಆರ್‌ಎಸ್‌ ಮತ್ತು ರಾಜ್ಯದ ಹಲವು ಸಚಿವರು ಸಂತಾಪ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು